ಕೆನಡಾದ ವ್ಯಾಂಕೋವರ್ ಗುಂಡಿನ ದಾಳಿ, ಇಬ್ಬರ ಸಾವು, 4 ಮಂದಿಗೆ ಗಾಯ

ಕೆನಡಾ,ಜು.26- ಕೆನಡಾದ ವ್ಯಾಂಕೋವರ್‍ನಲ್ಲಿ ಭಾರೀ ಗುಂಡಿನ ದಾಳಿ ನಡೆದಿದ್ದು , ಇಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದಾರೆ. ಪ್ರತಿ ದಾಳಿಯಲ್ಲಿ ಶಂಕಿತ ದಾಳಿಕೋರನೂ ಕೂಡ ಸಾವನ್ನಪ್ಪಿದ್ದಾನೆ. ಲಾಂಗ್ಲಿ ಮತ್ತು ಲಾಂಗ್ಲಿ ಟೌನ್‍ಶಿಪ್‍ನ 5 ಸ್ಥಳಗಳಲ್ಲಿ ದಾಳಿಕೋರರು ದಾಳಿ ನಡೆಸಿದ್ದು, ನಿರಾಶ್ರಿತರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಆದರೆ ಪೊಲೀಸ್ ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ. ಪೊಲೀಸ್ ಅಧಿಕಾರಿಗಳು ಶಂಕಿತರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. ಈ ಜನರ ನಡುವೆ ಏನಾದರೂ ಸಂಪರ್ಕವಿದೆಯೇ ಅಥವಾ ಇಲ್ಲವೇ ಎಂದು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ […]