ಅಪಾರ್ಟ್‍ಮೆಂಟ್ ಛಾವಣಿ ಕುಸಿದು ಇಬ್ಬರು ಸಾವು, 6 ಮಂದಿ ಗಾಯ

ಹರಿಯಾಣ, ಫೆ.11- ಅಪಾರ್ಟ್‍ಮೆಂಟ್ ಛಾವಣಿ ಕುಸಿದು ಇಬ್ಬರು ಸಾವನ್ನಪ್ಪಿ ಆರು ಮಂದಿ ತೀವ್ರವಾಗಿ ಗಾಯಗೊಂಡಿರುವುದಲ್ಲದೆ ಹಲವರು ಅವಶೇಷಗಳಡಿ ಸಿಲುಕಿರುವ ಘಟನೆ ಗುರುಗ್ರಾಮದ ಚಿಂಟೆಲ್ಸಾ ಪ್ಯಾರಾಡಿಸೊ ಹೌಸಿಂಗ್ ಕಾಂಪ್ಲೆಕ್ಸ್‍ನಲ್ಲಿ ತಡರಾತ್ರಿ ನಡೆದಿದೆ. ಕಟ್ಟಡ ದುರಸ್ತಿ ವೇಳೆ ಆರನೆ ಮಹಡಿಯ ಛಾವಣಿ ಕುಸಿದು ಈ ದುರ್ಘಟನೆ ಸಂಭವಿಸಿದ್ದು, ಅವಶೇಷಗಳಡಿ ಹಲವರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಗುರುಗ್ರಾಮ ಪೊಲೀಸ್ ಆಯುಕ್ತರು ಅಗ್ನಿಶಾಮಕ ದಳದ ಸಿಬ್ಬಂದಿ, ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ತಂಡಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅವಶೇಷಗಳಡಿ […]