12ರಿಂದ ಹಾಲುಮತ ಸಂಸ್ಕೃತಿ ವೈಭವ

ಬೆಂಗಳೂರು,ಜ.10- ರಾಯಚೂರಿನ ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠ ತಿಂಥಣಿಬ್ರಿಜ್ ಶ್ರೀ ಮಠದಲ್ಲಿ ಇದೇ 12ರಿಂದ ಮೂರು ದಿನಗಳ ಕಾಲ 16ನೇ ಹಾಲು ಮತ ಸಂಸ್ಕೃತಿ ವೈಭವ-2023 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಎಂ.ರೇವಣ್ಣ , ಜಾನಪದ, ನಾಟಕ ಸೇರಿದಂತೆ ವಿವಿಧ ಕಲೆಗಳಿಗೆ ಸರ್ಕಾರ ಅಕಾಡೆಮಿ ರೂಪಿಸಿ ಕಲೆಯ ಬೆಳವಣಿಗೆಗೆ ಸಹಕಾರ ನೀಡುತ್ತಿದೆ. ಡೊಳ್ಳು ಕುಣಿತ, ಗೊರವರ ಕುಣಿತ, ಪೂಜಾಕುಣಿತ, ಕರಡಿ ಕುಣಿತದಂತ ಹಲವಾರು ನೃತ್ಯ ಕಲೆಗಳು ಹಾಲು […]