ಚಿಕ್ಕಮಗಳೂರು ಪೊಲೀಸರಿಗೆ ಶರಣಾದ ರೌಡಿ ಹಂದಿ ಅಣ್ಣಿ ಹಂತಕರು

ಚಿಕ್ಕಮಗಳೂರು, ಜು.20- ರೌಡಿ ಹಂದಿ ಅಣ್ಣಿ ಹತ್ಯೆ ಪ್ರಕರಣದ 8 ಮಂದಿ ಶಂಕಿತ ಆರೋಪಿಗಳು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಕಚೇರಿಗೆ ಬಂದು ಶರಣಾಗಿದ್ದಾರೆ. ಶಿವಮೊಗ್ಗದ ವಿನೋಬಾ ನಗರದ ಕಾರ್ತಿಕ್ ಆಲಿಯಾಸ್ ಕಡಾ ಕಾರ್ತಿಕ್ (33), ಫಾರೂಕ್ (40), ಹರಿಹರ ತಾಲೂಕು ಮಲೆಬೆನ್ನೂರಿನ ಆಂಜನೇಯ ಅಲಿಯಾಸ್ ಅಂಜನಿ (26), ಮಧು (27), ಮಧುಸೂದನ್ ಅಲಿಯಾಸ್ ಕರಿಯ (32), ಚೌಡೇಶ್ವರಿ ಕಾಲೋನಿಯ ಮದನ್ (25), ಕಡೂರಿನ ನಿತಿನ್ ಅಲಿಯಾಸ್ ಭಜರಂಗಿ ಭಾಯಿ (29), ಹುಳ ಗಟ್ಟಿಯ ಚಂದನ್ (22) ಶರಣದವರು. […]