ಹಿರಿಯ ನಾಗರಿಕರೊಬ್ಬರಿಗೆ ಒದ್ದು ಚಿತ್ರವಿಚಿತ್ರವಾಗಿ ಹಿಂಸಿಸಿದ ಪೊಲೀಸ್ ಕಾನ್ಸ್ಟೇಬಲ್

ರೆವಾ, ಜು.30- ಹಿರಿಯ ನಾಗರಿಕರೊಬ್ಬರನ್ನು ರೈಲ್ವೆ ಪೊಲೀಸ್ ಕಾನ್ಸ್‍ಟೆಬಲ್ ಒಬ್ಬರು ಅಮಾನವೀಯವಾಗಿ ಥಳಿಸಿ, ರೈಲ್ವೆ ಟ್ರಾಕ್ ಮೇಲೆ ಉಲ್ಟಾ ಹಿಡಿದು ದೌರ್ಜನ್ಯ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕವಾಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮಧ್ಯ ಪ್ರದೇಶದ ರೆವಾ ಜಿಲ್ಲೆಯ ಜಬ್ಲಾಪುರ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದ್ದು ತಡವಾಗಿ ವರದಿಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರೈಲ್ವೆ ಪೊಲೀಸ್ ಹಿರಿಯ ಅಕಾರಿಗಳು ಕಾನ್ಸ್‍ಟೆಬಲ್‍ನನ್ನು ಅಮಾನತುಗೊಳಿಸಿದ್ದಾರೆ. ದುರ್ಬಲರಂತೆ ಕಾಣುವ ಹಿರಿಯ ನಾಗರಿಕರು ರೈಲ್ವೆ ಪೊಲೀಸ್ ಅಧಿಕಾರಿಯೊಂದಿಗೆ ಉದ್ಧಟತನದಿಂದ ವರ್ತಿಸಿದರು ಎಂಬ […]