ಬಿಸಿಯೂಟ ಸೇವಿಸಿ 70ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಹನೂರು,ಜ.11- ಮಧ್ಯಾಹ್ನದ ಬಿಸಿಯೂಟ ಸೇವಿಸಿ 70ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ ಗೊಂಡಿರುವ ಘಟನೆ ವಡಕೆಹಳ್ಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾನ ಜರುಗಿದೆ. ತಾಲ್ಲೂಕಿನ ವಡಕೆಹಳ್ಳ ಶಾಲೆಯಲ್ಲಿ ಎಂದಿನಂತೆ ಮಧ್ಯಾಹ್ನದ ಬಿಸಿಯೂಟ ತಯಾರಾಗಿದೆ. ಅಡಿಗೆ ಸಹಾಯಕರ ನಿರ್ಲಕ್ಷ್ಯದಿಂದ ಸಾಂಬಾರಿಗೆ ಹಲ್ಲಿ ಬಿದ್ದಿದ್ದು ಅದನ್ನು ಗಮನಿಸದೆ ಮಕ್ಕಳಿಗೆ ಊಟ ಬಡಿಸಲಾಗಿತ್ತು, ಇದನ್ನು ಸೇವಿಸಿದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿದ್ದಾರೆ. ಬಳಿಕ ಮಕ್ಕಳು ವಾಂತಿ ಮಾಡಿ ಕೊಂಡು ನಿತ್ರಾಣ ಗೊಳ್ಳುತ್ತಿದ್ದಂತೆ ಮಕ್ಕಳು ಮತ್ತು ಪೋಷಕರು ಸಾಂಬಾರಿನ ಪಾತ್ರೆ ಪರಿಶೀಲಿಸಿದಾಗ ಹಲ್ಲಿ […]