ದೇಶದ 20 ಕೋಟಿಗೂ ಅಧಿಕ ಮನೆಗಳ ಮೇಲೆ ಹಾರಾಡಲಿವೆ ತ್ರಿವರ್ಣ ಧ್ವಜಗಳು

ನವದೆಹಲಿ,ಆ.13- ಆಜಾದಿ ಕ ಅಮೃತ ಮಹೋತ್ಸವದ ಅಂಗವಾಗಿ ಇಂದಿನಿಂದ ದೇಶದ 20 ಕೋಟಿಗೂ ಅಧಿಕ ಮನೆಗಳ ಮೇಲೆ ತ್ರಿವರ್ಣ ಧ್ವಜಗಳು ರಾರಾಜಿಸಿವೆ.ಕಳೆದ ತಿಂಗಳು ಮನ್-ಕಿ-ಬಾತ್ ಜನಪ್ರಿಯ ರೇಡಿಯೋ ಸರಣಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನೇಂದ್ರ ಮೋದಿ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿತು. ಅದರಲ್ಲಿ ಆ.2ರಿಂದ 15ರವರೆಗೆ ಸಾಮಾಜಿಕ ಮಾಧ್ಯಮಗಳ ಪ್ರೋಫೈಲ್ ಪಿಚ್ಚರ್‍ನಲ್ಲಿ ತ್ರಿವರ್ಣ ಧ್ವಜ ಅಳವಡಿಸಿಕೊಳ್ಳುವುದು, ಆ.13ರಿಂದ 15ವರೆಗೆ ಹರ್ ಘರ್ ತಿರಂಗಾ ಅಭಿಯಾನವನ್ನು ಆಚರಿಸಲು ಕರೆ ನೀಡಿದ್ದರು.ಇದರ ಪ್ರಯುಕ್ತ ಈಗಾಗಲೇ ಕೇಂದ್ರ […]

ಹರ್-ಘರ್ ತಿರಂಗ ಅಭಿಯಾನಕ್ಕೆ ರಾಷ್ಟ್ರಧ್ವಜಗಳ ಕೊರತೆ

ಬೆಂಗಳೂರು,ಆ.12- ಮನೆ-ಮನೆ ತಿರಂಗಾ ಅಭಿಯಾನಕ್ಕೆ ರಾಜ್ಯ ಸರ್ಕಾರ ಎಲ್ಲಾ ರೀತಿಯಲ್ಲೂ ಸಕಲ ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ ಒಂದು ಕೋಟಿ ರಾಷ್ಟ್ರಧ್ವಜ ಹಾರಿಸುವ ಗುರಿ ರಾಜ್ಯ ಸರ್ಕಾರದ್ದಾಗಿದೆ. ಆದರೆ, ರಾಷ್ಟ್ರಧ್ವಜಗಳ ಕೊರತೆ ಎದುರಾಗಿರುವುದರಿಂದ ಒಂದು ಕೋಟಿಯ ಗುರಿ ಮುಟ್ಟುವುದು ಅನುಮಾನವಾಗಿದೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನವನ್ನು ನಾಳೆಯಿಂದ ಆ.15 ರವರೆಗೆ ಹಮ್ಮಿಕೊಳ್ಳುವಂತೆ ಪ್ರಧಾನಿ ಮೋದಿ ಕರೆ ಕೊಟ್ಟಿದ್ದರು. ಅದರಂತೆ ರಾಜ್ಯ ಸರ್ಕಾರ ಈ ಅಭಿಯಾನದ ಯಶಸ್ಸಿಗಾಗಿ ಸಕಲ ತಯಾರಿ ನಡೆಸಿದೆ. ಈ […]

ಹರ್ ಘರ್ ತಿರಂಗಾ ಕುರಿತು ಕಾಂಗ್ರೆಸ್ ಟೀಕೆಗೆ ಸಿಎಂ ತಿರುಗೇಟು

ಮೈಸೂರು,ಆ.11- ಎಪ್ಪತ್ತೈದನೆ ಸ್ವಾತಂತ್ರ್ಯೋತ್ಸವವನ್ನು ಸರ್ಕಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಆಚರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮೈಸೂರಿನಲ್ಲಿಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಹೇಳಿದರು. 75ನೇ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಅಳವಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಾದ್ಯಂತ ಸರ್ಕಾರ ಅದ್ಧೂರಿಯಾಗಿ ಆಚರಿಸಲಿದೆ. ಮುಂದಿನ ನಮ್ಮ ದೇಶದ ಭವಿಷ್ಯ ನಮ್ಮ ಜನತೆಯ ಕೈಯಲ್ಲಿದೆ. ಹರ್ ಘರ್ ತಿರಂಗಕ್ಕೆ […]

ಹರ್ ಘರ್ ತಿರಂಗಾ ಅಭಿಯಾನಕ್ಕೆ ಗೃಹ ಸಚಿವ ಜ್ಞಾನೇಂದ್ರ ಚಾಲನೆ

ಬೆಂಗಳೂರು, ಆ.4- ರಾಜ್ಯ ವಿಪತ್ತು ಸ್ಪಂದನಾ ಪಡೆ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಗೃಹ ಸಚಿವ ಆರಗಜ್ಞಾನೇಂದ್ರ ಚಾಲನೆ ನೀಡಿದರು. ವಿಧಾನಸೌಧದ ಮುಂಭಾಗ ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆ ರಾಜ್ಯ ವಿಪತ್ತು ಸ್ಪಂದನಾ ಪಡೆಯ ಸಿಬ್ಬಂದಿ ರಾಷ್ಟ್ರ ಧ್ವಜವಿಡಿದು ಹೆಜ್ಜೆ ಹಾಕಿದರು. ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಗೃಹ ಸಚಿವರು, ಸಾವಿರಾರು ಜನರ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಈ ದೇಶದಲ್ಲಿ ಹುಟ್ಟಿದ […]

ಹರ್ ಘರ್ ತಿರಂಗ : ಇಂದಿನಿಂದ ಆ.15ರವರೆಗಿನ ತಿರಂಗೋತ್ಸವ

ನವದೆಹಲಿ,ಆ.2- ರಾಷ್ಟ್ರದ ತ್ರಿವರ್ಣ ಧ್ವಜ ವಿನ್ಯಾಸಗೊಳಿಸಿದ ಪಿಂಗಾಳಿ ವೆಂಕಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ ಇಂದಿನಿಂದ ಆ.15ರವರೆಗೆ ತಿರಂಗೋತ್ಸವ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ರಾಷ್ಟ್ರ ಧ್ವಜ ವಿನ್ಯಾಸಗೊಲಿಸಿದ ಪಿಂಗಾಳಿ ವೆಂಕಯ್ಯ ಅವರ ಶ್ರಮ ಮತ್ತು ಬದ್ದತೆಗೆ ದೇಶ ಸದಾಕಾಲ ಋಣಿಯಾಗಿರುತ್ತದೆ. ಇದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡೆಯುವ ವಿಷಯ. ದೇಶದ ಪ್ರಗತಿಗೆ ನಿರಂತರವಾಗಿ ಕೆಲಸ ಮಾಡಲು ಇದು ಸ್ಪೂರ್ತಿ ಮತ್ತು ಶಕ್ತಿದಾಯಕ ಎಂದು ಹೇಳಿದ್ದಾರೆ. ವೆಂಕಯ್ಯ ಅವರ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರ ವಿಶೇಷ […]