ಗುಜರಾತ್‍ ಚುನಾವಣೆ : ಬಿಜೆಪಿ 160 ಅಭ್ಯರ್ಥಿಗಳ ಪಟ್ಟಿ ಪ್ರಕಟ

ನವದೆಹಲಿ,ನ.10- ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್‍ನ ವಿಧಾನಸಭೆಗೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ 160 ಮಂದಿಗೆ ಬಿ ಫಾರಂ ಘೋಷಿಸಿದೆ. ಕೇಂದ್ರ ಸಚಿವರಾದ ಮನುಸ್ಕ್ ಮಾಂಡವೀಯ, ಭೂಪೇಂದ್ರಯಾದವ್, ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಟೇಲ್ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಅದರ ಪ್ರಕಾರ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗಟ್ಲೋಡಿಯಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಕ್ರಿಕೆಟಿಗ ರವೀಂದ್ರ ಜಡೇಜ ಅವರ ಪತ್ನಿ ರೈವಾಬ ಜಡೇಜ ಅವರಿಗೆ ಜಾಮ್ನಾನಗರ್ ಉತ್ತರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ […]

ಗುಜರಾತ್ ಚುನಾವಣೆಗೆ ದಿನಗಣನೆ : ಮತ್ತೆ ನೆನಪಾಗುತ್ತಿದ್ದಾರೆ ಈ ಹೋರಾಟಗಾರರು

ಅಹಮದಾಬಾದ್,ಅ.23- ಗುಜರಾತ್ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮತ್ತೆ ಈ ಮೂವರು ನೆನಪಾಗುತ್ತಿದ್ದಾರೆ. ಯಾರು ಅಂತೀರಾ… ಅವರೇ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಟೇಲ್ ಹಾಗೂ ಜಿಗ್ನೇಶ್ ಮೇವಾನಿ. ಕಳೆದ 2017 ರ ಚುನಾವಣೆ ಪೂರ್ವದಲ್ಲಿ, ಮೂವರು ಯುವ ನಾಯಕರಾದ ಅಲ್ಪೇಶ್ ಠಾಕೋರ್, ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್ ಮೇವಾನಿ ಅವರು ಗುಜರಾತ್ ಸರ್ಕಾರದ ವಿರುದ್ಧ ಸಾಮಾಜಿಕ, ಸಾಂಸ್ಕøತಿಕ ಅಥವಾ ದಮನ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದವರು. ಮಾತ್ರವಲ್ಲ, ಈ ಮೂವರು ಬಿಜೆಪಿ ನೇತೃತ್ವದ ಆನಂದಿಬೆನ್ ಪಟೇಲ್ ಸರ್ಕಾರದ ಅಡಿಪಾಯವನ್ನು […]