ಸಂಸತ್‍ನಲ್ಲಿ ಏಕರೂಪ ನಾಗರೀಕತೆ ಮಸೂದೆ ಪ್ರಸ್ತಾಪ ನಿರೀಕ್ಷೆ

ನವದೆಹಲಿ,ಡಿ.9-ವಿವಿಧ ರಾಜ್ಯಗಳಲ್ಲಿ ಸದ್ದು ಮಾಡಿರುವ ಏಕ ರೂಪದ ನಾಗರೀಕ ಸಂಹಿತೆ ಮಸೂದೆ ಕುರಿತು ಇಂದು ಸಂಸತ್‍ನಲ್ಲೂ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಬಿಜೆಪಿಯ ಸಂಸದ ಹರ್ನಾಥ್‍ಸಿಂಗ್‍ಯಾಧವ್ ಅವರು ಏಕರೂಪ ನಾಗರಿಕ ಸಂಹಿತೆ ಕುರಿತು ಚರ್ಚೆಗೆ ಶೂನ್ಯವೇಳೆಯಲ್ಲಿ ಅವಕಾಶ ಮಾಡಿಕೊಡಬೇಕೆಂದು ಸಭಾಪತಿ ಜಗದೀಪ್ ಧನ್ಕರ್ ಅವರಿಗೆ ನೋಟಿಸ್ ನೀಡಿದ್ದಾರೆ. ಸೂಕ್ಷ್ಮ ವಿಷಯವಾಗಿರುವ ಏಕರೂಪ ನಾಗರೀಕತೆ ಸಂಹಿತೆ (ಯುಸಿಸಿ) ಕುರಿತು ಈಗಾಗಲೇ ಹಲವು ರಾಜ್ಯಗಳಲ್ಲಿ ಚರ್ಚೆಗಳು ನಡೆದಿವೆ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಕುರಿತು ಚರ್ಚೆಗಳಾಗಿವೆ. ಮಧ್ಯಪ್ರದೇಶ ರಾಜ್ಯ ಏಕರೂಪ […]