1.60 ಕೋಟಿ ಮೌಲ್ಯದ ಹ್ಯಾಶಿಶ್ ಆಯಿಲ್ ವಶ, ಇಬ್ಬರ ಬಂಧನ

ಬೆಂಗಳೂರು,ಆ.3- ನಗರದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಕೇರಳ ಹಾಗೂ ಮಂಗಳೂರು ಮೂಲದ ಇಬ್ಬರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿ 1.60 ಕೋಟಿ ರೂ. ಮೌಲ್ಯದ 2 ಕೆಜಿ 60 ಗ್ರಾಂ ಹ್ಯಾಶಿಶ್ ಆಯಿಲ್ ವಶ ಪಡಿಸಿಕೊಂಡಿದ್ದಾರೆ. ಕೇರಳದ ಸಿಫಾನ್ ಮತ್ತು ಮಂಗಳೂರಿನ ಮಹಮ್ಮದ್ ಅಸ್ವಕ್ ಬಂಧಿತರು. ಆರೋಪಿ ಸಿಫಾನ್ ನಗರದ ಮಡಿವಾಳದಲ್ಲಿ ಪೇಯಿಂಗ್ ಗೆಸ್ಟ್ ನಡೆಸುವ ಸೋಗಿನಲ್ಲಿ ಹಾಗೂ ಮೊಹಮ್ಮದ್ ಅಸ್ವಕ್ ಆನ್‍ಲೈನ್ ಯೂಟ್ಯೂಬ್ ಚಾನೆಲ್ ಆರ್ಟಿಸ್ಟ್ ಮ್ಯಾನೇಜ್‍ಮೆಂಟ್ ಬಿಸಿನೆಸ್ ಮಾಡುವುದಾಗಿ ಮೇಲ್ನೋಟಕ್ಕೆ ಬಿಂಬಿಸಿಕೊಂಡು ಒಳಗೆ ಮಾದಕವಸ್ತು […]

ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ: 90 ಲಕ್ಷ ಮೌಲ್ಯದ ಮಾದಕ ವಶ

ಬೆಂಗಳೂರು, ಜು.16- ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಸಂಗ್ರಹಿಸಿಕೊಂಡು ಮಾರಾಟದಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 90 ಲಕ್ಷ ಮೌಲ್ಯದ ಹ್ಯಾಶಿಶ್ ಆಯಿಲ್, ಹಾಗೂಗಾಂಜಾ ವಶಪಡಿಸಿಕೊಂಡಿದ್ದಾರೆ. ಸೀತಾ, ಸುಮಿತ್ರಾ ಮತ್ತು ಚಂದ್ರಶೇಖರ್ ಬಂತ ಆರೋಪಿಗಳು. ಈ ಮೂವರು ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ತುನಿ ಗ್ರಾಮಕ್ಕೆ ಹೋಗಿ ಅಲ್ಲಿರುವ ಪರಿಚಯಸ್ಥ ವ್ಯಕ್ತಿಯಿಂದ ಮಾದಕ ವಸ್ತುಗಳನ್ನು ಖರೀದಿಸಿದ್ದಾರೆ. ನಂತರ ಅವುಗಳನ್ನು ಮಹಿಳಾ ಆರೋಪಿಯ ಮನೆಯಲ್ಲಿ ಸಂಗ್ರಹಿಸಿಟ್ಟು ನಗರದಲ್ಲಿ ಮಾರಾಟ ಮಾಡಿ ಅಕ್ರಮ ಹಣ […]