“ವಿಮಾನದಲ್ಲಿ ಅನ್ನ ತಿಂದಾಗಲೇ ನಾವು ಬದುಕಿದ್ದೇವೆ ಎನಿಸಿತು”

ಹುಬ್ಬಳ್ಳಿ,ಮಾ.4- ಆಗಾಗ ಸಿಗುತ್ತಿದ್ದ ಬಿಸ್ಕತ್, ಬಾಳೆಹಣ್ಣು ಹಾಗೂ ಚಿಪ್ಸ್ ತಿಂದೇ ವಾರ ಜೀವನ ಕಳೆದಿದ್ದೇವೆ. ಪೋಲೆಂಡ್‍ಗೆ ಬಂದು ಭಾರತೀಯ ವಿಮಾನದಲ್ಲಿ ಕುಳಿತು ಅನ್ನ ತಿಂದಾಗಲೇ ಬದುಕಿದ್ದೇವೆ ಅನಿಸಿತು. ಉಕ್ರೇನ್‍ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಬಂದ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ತರೂರ ಗ್ರಾಮದ ರಂಜಿತಾ ಶಂಕ್ರಪ್ಪ ಕಲಕಟ್ಟಿ ಹಾಗೂ ಹಾನಗಲ್‍ನ ಶಿವಾನಿ ಮಡಿವಾಳರ ಅವರ ಮಾತುಗಳಿವು. ಬೆಂಗಳೂರಿನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಿನ್ನೆ ಬಂದ ಅವರು ಸಂತೋಷ ದಿಂದಲೇ ಮಾಧ್ಯಮದವರ ಜೊತೆ ಮಾತನಾಡಿದರು. ಉಕ್ರೇನ್‍ನಲ್ಲಿ ಎದುರಿಸಿದ ನೋವುಗಳನ್ನು ಹಂಚಿಕೊಂಡರು. […]