ಕೊಲೆಯಾದ ಪ್ರವೀಣ್ , ಮಸೂದ್ ಹಾಗೂ ಫಾಜಿಲ್ ಕುಟುಂಬಸ್ಥರಿಗೆ ಎಚ್‍ಡಿಕೆ ಸಾಂತ್ವನ

ಬೆಂಗಳೂರು,ಜು.31- ಇತ್ತೀಚೆಗೆ ಹತ್ಯೆಗೀಡಾ ಪ್ರವೀಣ್ ನೆಟ್ಟಾರು, ಮಸೂದ್ ಹಾಗೂ ಫಾಜಿಲ್ ಅವರ ಕುಟುಂಬಸ್ಥರನ್ನು ನಾಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ. ನಾಳೆ ಬೆಳಗ್ಗೆ ಮಂಗಳೂರು ಪ್ರವಾಸ ಕೈಗೊಂಡಿರುವ ಕುಮಾರಸ್ವಾಮಿ, ಪ್ರವೀಣ್ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಬಳಿಕ ಮಸೂದ್ ಅವರ ಮನೆಗೂ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಸಾಂತ್ವನ ಹೇಳಲಿದ್ದಾರೆ. ಸುರತ್ಕಲ್‍ಗೆ ಭೇಟಿ ನೀಡಿ ಫಾಜಿಲ್ ಅವರ ಕುಟುಂಬಸ್ಥರನ್ನು ಸಂಪರ್ಕಿಸಿ ಸಾಂತ್ವನ ಹೇಳಲಿದ್ದಾರೆ. ನಂತರ ಸಾಮರಸ್ಯ […]