ವೋಟಿಗಾಗಿ ರಾಷ್ಟ್ರೀಯ ಪಕ್ಷಗಳು ಸಮಾಜ ಹಾಳು ಮಾಡುತ್ತಿವೆ : ಎಚ್‍ಡಿಕೆ

ಚನ್ನಪಟ್ಟಣ,ಫೆ.27- ಮತಕ್ಕಾಗಿ ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವ ಎರಡು ರಾಷ್ಟ್ರೀಯ ಪಕ್ಷಗಳೇ ರಾಜ್ಯದಲ್ಲಿ ಕೋಮು ಸೌಹಾರ್ದತೆ ಹಾಳಾಗಲು ನೇರ ಕಾರಣವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಕಾಂಗ್ರೆಸ್ ಎರಡು ಒಂದೇ ನಾಣ್ಯದ ಎರಡು ಮುಖಗಳು, ನಾನು ಇವರಲ್ಲಿ ಯಾರ ಪರವೂ ಇಲ್ಲ, ನಾನು ಯಾವತ್ತಿದ್ದರೂ ಜನತೆ ಪರವಾಗಿದ್ದೇನೆ  ಎಂದು ಸ್ಪಷ್ಟಪಡಿಸಿದರು. ಸಮವಸ್ತ್ರದ ವಿಚಾರವಾಗಿ ಆರಂಭವಾದ ಘಟನೆ. ಇಡೀ ರಾಜ್ಯದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸಲಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದ ಎರಡು ಅವಯಲ್ಲೂ ಹಿಂದೂ […]