ರಾಷ್ಟ್ರೀಯ ಪಕ್ಷಗಳಿಂದ ಜಾತಿ ನಡುವೆ ಸಂಘರ್ಷ ಸೃಷ್ಟಿ: ರೇವಣ್ಣ

ಬೇಲೂರು, ಜ.4- 2016ರಲ್ಲಿ ಮತಾಂತರ ವಿರೋಧ ಮಸೂದೆಯನ್ನು ಕಾಂಗ್ರೆಸ್ ಮಂಡನೆ ಮಾಡಿತ್ತು. ಈಗ ಬಿಜೆಪಿ ಸರ್ಕಾರ ಮತ್ತಷ್ಟು ಕಾನೂನು ಸೇರಿಸಿ ಜಾರಿಗೆ ತಂದಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಹೇಳಿದರು. ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರಿಗೆ ಅಭಿನಂದನೆ ಹಾಗೂ ಜನ ಪ್ರತಿನಿಗಳು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು, ಎರಡು ರಾಷ್ಟ್ರೀಯ ಪಕ್ಷಗಳು ಜಾತಿ ಜಾತಿಗಳ ನಡುವೆ ಹೊಡೆದಾಡಿಸಿ ಸಂಘರ್ಷ […]