ಸಿಎಂ ಮನೆ ಮುಂದೆ ಎಚ್.ಡಿ.ರೇವಣ್ಣ ಏಕಾಂಗಿ ಧರಣಿ

ಬೆಂಗಳೂರು, ಜ.18- ಹೊಳೆನರಸೀಪುರ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನಲ್ಲಿ ಎಂಎಸ್‍ಸಿ ಸೈಕಾಲಜಿ ಮತ್ತು ಫುಡ್ ಮತ್ತು ನ್ಯೂಟ್ರೀಷಿಯನ್ ಕೋರ್ಸ್‍ಗಳ ಆರಂಭಕ್ಕೆ ಆಗ್ರಹಿಸಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಇಂದು ಏಕಾಂಗಿ ಧರಣಿ ನಡೆಸಿದರು. ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾ ಆವರಣದಲ್ಲಿ ಧರಣಿ ನಡೆಸಿ 2022-23ನೆ ಶೈಕ್ಷಣಿಕ ಸಾಲಿನಲ್ಲಿ ಎರಡು ಹೊಸ ಕೋರ್ಸ್‍ಗಳ ಪ್ರಾರಂಭಕ್ಕೆ ಸರ್ಕಾರ ಅನುಮತಿ ನೀಡಬೇಕೆಂದು ಒತ್ತಾಯಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಎರಡೂ ಕೋರ್ಸ್‍ಗಳ ಉಪನ್ಯಾಸಕರಿಗೆ ತಗುಲುವ ವೇತನ ವೆಚ್ಚವನ್ನು ತಾತ್ಕಾಲಿಕವಾಗಿ ಸಿಡಿಸಿ ಸಮಿತಿ […]