ಒಬ್ಬನ ಕೊಲೆಯಲ್ಲಿ ಅಂತ್ಯವಾಯ್ತು ಸ್ನೇಹಿತರ ಹೆಡ್‍ಫೋನ್ ಜಗಳ

ಬೆಂಗಳೂರು,ಜ.2- ಸ್ನೇಹಿತರ ನಡುವೆ ಹೆಡ್‍ಫೋನ್ ವಿಚಾರದಲ್ಲಿ ಉಂಟಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ತಮಿಳುನಾಡಿನ ಕೃಷ್ಣಗಿರಿ ನಿವಾಸಿ ಕಾರ್ತಿಕ್(27) ಕೊಲೆಯಾಗಿರುವ ಪೇಂಟರ್. ದೊಡ್ಡ ನಾಗಮಂಗಲದ ಬಾಲಾಜಿ ಲೇಔಟ್‍ನಲ್ಲಿ ನಿರ್ಮಾಣ ಹಂತದ ಮನೆಯ ಪೇಂಟಿಂಗ್ ಕೆಲಸಕ್ಕೆಂದು ಕೃಷ್ಣಗಿರಿಯಿಂದ ಕಾರ್ತಿಕ್ ಸೇರಿದಂತೆ ನಾಲ್ವರು ಬಂದಿದ್ದು, ಕೆಲಸ ಮುಗಿಸಿ ಅಲ್ಲಿಯೇ ಮಲಗುತ್ತಿದ್ದರು.ಡಿ.31ರಂದು ರಾತ್ರಿ ಹೊಸ ವರ್ಷದ ಪಾರ್ಟಿ ಅಲ್ಲೇ ಮಾಡಿದ್ದು, ಆ ವೇಳೆ ಜೊತೆಯಲ್ಲಿದ್ದ ಕೆಲಸಗಾರ ರಜನೀಶ್ ಎಂಬಾತನ ಹೆಡ್‍ಫೋನ್‍ನನ್ನು […]