ಆರ್ಥಿಕ ಕೊರತೆಯಿಂದಾಗಿ ನಮ್ಮ ಕ್ಲಿನಿಕ್ ಸೇವೆ ಸ್ಥಗಿತ

ಬೆಂಗಳೂರು,ಜ.16- ರಾಜ್ಯದಲ್ಲಿ ದ್ವಿತೀಯ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಆರಂಭಿಸಿದ್ದ ನಮ್ಮ ಕ್ಲಿನಿಕ್ ಸೇವೆಯನ್ನು ಆರ್ಥಿಕ ಕೊರತೆಯಿಂದಾಗಿ ಸ್ಥಗಿತಗೊಳಿಸಲಾಗಿದೆ. ನಮ್ಮ ಕ್ಲಿನಿಕ್ ಗುರಿಯಂತೆಯೇ ರಾಜ್ಯ ಸರ್ಕಾರ ರಾಷ್ಟ್ರೀಯ ಆರೋಗ್ಯ ಮಿಷನ್‍ನಡಿ ಮೊಬೈಲ್ ವೈದ್ಯಕೀಯ ಘಟಕಗಳ (ಎಂಎಂಯು) ಸೇವೆಯನ್ನು 2022ರ ಆರಂಭಿಕ ತಿಂಗಳಿನಲ್ಲಿ ಆರಂಭಿಸಿತ್ತು. ಈ ಸೇವೆಗೆ ಬಜೆಟ್ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದೆ. 12 ವಿವಿಧ ಕ್ಷೇತ್ರಗಳಲ್ಲಿ ಸರ್ಕಾರ 70 ಎಂಎಂಯುಗಳನ್ನು ಒದಗಿಸಲು ಮುಂದಾಗಿತ್ತು. ದೂರದ ಪ್ರದೇಶಗಳಲ್ಲಿನ ತುರ್ತು ಸೇವೆಗಳನ್ನು ನೋಡಿಕೊಳ್ಳಲು ಸೇವೆ ಒದಗಿಸಲು ಸರ್ಕಾರ ನಿರ್ಧರಿಸಿತ್ತು. ರಾಷ್ಟ್ರೀಯ […]