ಸುಪ್ರೀಂಕೋರ್ಟ್ ಕಲಾಪಗಳ ನೇರ ಪ್ರಸಾರ

ನವದೆಹಲಿ,ಸೆ.27- ಸುಪ್ರೀಂಕೋರ್ಟ್ ಇದೇ ಮೊದಲ ಬಾರಿಗೆ ನ್ಯಾಯಾಲಯದ ಕಾರ್ಯ ಕಲಾಪಗಳನ್ನು ನೇರ ಪ್ರಸಾರ ಮಾಡಿದ್ದು, ವಚ್ರ್ಯುವಲ್ ಮಾದರಿಯಲ್ಲಿ ವಾದ-ಪ್ರತಿವಾದಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದೆ. ಹಲವು ಮಹತ್ವದ ಪ್ರಕರಣಗಳು ಇಂದು ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೊಳಪಟ್ಟಿವೆ. ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನೊಳಗೊಂಡ ಪೀಠ, ಆರ್ಥಿಕವಾಗಿ ದುರ್ಬಲವಾದ ವರ್ಗಕ್ಕೆ ಶೇ.10ರಷ್ಟು ಮೀಸಲಾತಿ ನೀಡುವ ಇಡಬ್ಲ್ಯುಎಸ್ ಕೋಟಾದ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದೆ. ಸಂವಿಧಾನದ 103ನೇ ತಿದ್ದುಪಡಿ ಮೂಲಕ ಇಡಬ್ಲ್ಯುಎಸ್ ಜಾರಿಗೆ ತಂದಿರುವುದು ನಿಯಮ ಬಾಹಿರ ಎಂದು ಹಲವಾರು […]