ಉದ್ಯಾನನಗರಿ ಬೆಂಗಳೂರಿನ ಹೊಸ ಹೆಸರು ‘ಮುಳಗು ನಗರಿ’

ಬೆಂಗಳೂರು, ಸೆ.1- ಬಿಜೆಪಿಯ ಭ್ರಷ್ಟಚಾರ ಮತ್ತು ದುರಾಡಳಿತದಿಂದ ಬೆಂಗಳೂರು ಬಹುಕೇತ ಮಳೆ ನೀರಿನಲ್ಲಿ ಮುಳುಗಿದ್ದು, ರಸ್ತೆಗಳು ಗುಂಡಿಗಳಿಂದ ಜನ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಮಾಜಿ ಸಚಿವ ಕೃಷ್ಣ ಬೈರೇಗೌಡ, ಬಿಜೆಪಿಯವರು ಬೆಂಗಳೂರನ್ನು ಹಣ ಕಿತ್ತುಕೊಳ್ಳುವ ಮರದಂತೆ ಬಳಕೆ ಮಾಡುತ್ತಿದ್ದಾರೆ. ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ. ಹೀಗಾಗಿ ಬೆಂಗಳೂರಿಗರು ಸಮಸ್ಯೆ ಅನುಭವಿಸಬೇಕಿದೆ, ಅಂತರಾಷ್ಟ್ರೀಯ ಮಟ್ಟದಲ್ಲೂ ಐಟಿ ಸಿಟಿಯ ವರ್ಚಸ್ಸು ಕುಗ್ಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಿಡುಗಡೆಯಾದ […]