ಅತಿವೃಷ್ಟಿ, ಪ್ರವಾಹ ಕುರಿತ ಚರ್ಚೆಗೆ 3 ದಿನ ಅವಕಾಶ : ಸಭಾಧ್ಯಕ್ಷ ಕಾಗೇರಿ

ಬೆಂಗಳೂರು,ಸೆ.13-ಅತಿವೃಷ್ಟಿ, ಪ್ರವಾಹಕ್ಕೆ ಸಂಬಂಧಿಸಿದಂತೆ ಇಂದಿನಿಂದ ಮೂರು ದಿನಗಳ ಕಾಲ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ತಿಳಿಸಿದರು.ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿಲುವಳಿ ಸೂಚನೆಯನ್ನು ನಿಯಮ 69ಕ್ಕೆ ಮಾರ್ಪಡಿಸಿ ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ. ವಿಷಯದ ಮಹತ್ವ ಅರಿತು ಈ ರೀತಿ ಮಾಡಲಾಗಿದೆ. ಸದಸ್ಯರ ಹಕ್ಕನ್ನು ಮೊಟಕುಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಮಾತನಾಡಿ, ಮಹತ್ವದ ಹಾಗೂ ಜರೂರಾದ ವಿಷಯವಾಗಿದ್ದರಿಂದ ನಿಲುವಳಿ ಸೂಚನೆಗೆ ಅವಕಾಶ ಕೋರಲಾಗಿತ್ತು. ಪೂರ್ವಭಾವಿ ವಿಷಯ ಪ್ರಸ್ತಾಪಕ್ಕೂ ಅವಕಾಶ ಮಾಡಿಕೊಡಲಾಗಿದೆ. […]