ವಾಲಿದ ವಿದ್ಯುತ್ ಕಂಬ, ನಿದ್ದೆಯಿಂದ ಏಳದ ಬೆಸ್ಕಾಂ ಸಿಬ್ಬಂದಿಗಳು

ಬೆಂಗಳೂರು,ಜ.17- ಎಂಜಿನಿಯರ್‍ಗಳ ಬೇಜವಬ್ದಾರಿತನದಿಂದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದುಬಿದ್ದು ತಾಯಿ-ಮಗು ಮೃತಪಟ್ಟ ಘಟನೆ ನಡೆದಿದ್ದರೂ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯತನ ಮಾತ್ರ ದೂರವಾಗಿಲ್ಲ. ರಸ್ತೆ ಬದಿಯ ವಿದ್ಯುತ್ ಕಂಬವೊಂದು ಈಗಲೋ ಆಗಲೋ ಉರುಳಿಬೀಳುವಂತೆ ವಾಲಿಕೊಂಡಿದ್ದರೂ ಬೆಸ್ಕಾಂ ಸಿಬ್ಬಂದಿಗಳ ಕಣ್ಣಿಗೆ ಮಾತ್ರ ಇದು ಕಾಣದಿರುವುದು ದುರಂತವೇ ಸರಿ. ಹೆಣ್ಣೂರು-ಕೊತ್ತನೂರು ಮುಖ್ಯರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಸಂಪೂರ್ಣವಾಗಿ ವಾಲಿಕೊಂಡಿದೆ. ಈ ಕುರಿತಂತೆ ಸ್ಥಳೀಯರು ಬೆಸ್ಕಾಂಗೆ ದೂರು ನೀಡಿದ್ದರೂ ಸಿಬ್ಬಂದಿಗಳು ಮಾತ್ರ ಘಟನಾ ಸ್ಥಳಕ್ಕೆ ಆಗಮಿಸದೆ ಬೇಜವಬ್ದಾರಿತನ ಪ್ರದರ್ಶಿಸಿದ್ದಾರೆ. ವಾಲಿರುವ ಕಂಬದ ಕೆಳಗೆ […]