ಸೋಲಿನ ಭೀತಿ, ಕ್ಷೇತ್ರ ಗೊಂದಲ, ಸಿದ್ದರಾಮಯ್ಯ ಅತಂತ್ರ

ಬೆಂಗಳೂರು,ಮಾ.18- ವಿಧಾನಸಭೆ ಚುನಾವಣೆ ಯಲ್ಲಿ ಸ್ರ್ಪಧಿಸುವ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಳ್ಳುತ್ತಿದ್ದಂತೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆ ಬಗ್ಗೆ ಗೊಂದಲಗಳು ಸೃಷ್ಟಿಯಾಗಿವೆ. ಈ ಮೊದಲು ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಅಲ್ಲಿ ಗೆಲುವಿನ ಸಾಧ್ಯತೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಖುದ್ದು ಹೈಕಮಾಂಡ್ ಸುರಕ್ಷಿತ ಕ್ಷೇತ್ರ ಆಯ್ದುಕೊಳ್ಳುವಂತೆ ಸಲಹೆ ನೀಡಿದೆ ಎನ್ನಲಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ರ್ಪಧಿಸಿದ್ದರು. ಚಾಮುಂಡೇಶ್ವರಿ ಯಲ್ಲಿ ಸೋಲು […]

ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಬಂಪರ್ ಕೊಡುಗೆ ನಿರೀಕ್ಷೆ

ಬೆಂಗಳೂರು,ಜ.31- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಬಹುನಿರೀಕ್ಷಿತ ಪ್ರಸಕ್ತ ಸಾಲಿನ ಬಜೆಟ್ ನಾಳೆ ಮಂಡನೆಯಾಗಲಿದ್ದು, ವಿಧಾನಸಭೆ ಚುನಾವಣೆ ಹೊಸ್ತಿನಲ್ಲಿರುವ ಕರ್ನಾಟಕಕ್ಕೆ ಬಂಪರ್ ಕೊಡುಗೆಗಳನ್ನು ನಿರೀಕ್ಷಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದರಿಂದ ಸಹಜವಾಗಿ ತಮ್ಮ ತವರು ರಾಜ್ಯಕ್ಕೆ ಬಜೆಟ್‍ನಲ್ಲಿ ಉಡುಗೊರೆಗಳ ಭಾಗ್ಯವನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಮತದಾರರನ್ನು ಆಕರ್ಷಿಸಲು ಒಂದಿಷ್ಟು ಜನಪ್ರಿಯ ಯೋಜನೆಗಳ ಘೋಷಣೆ ಹಾಗೂ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಅನುಷ್ಠಾನಕ್ಕೆಹಸಿರು ನಿಶಾನೆ ತೋರುವ ಸಾಧ್ಯತೆಯನ್ನು ತಳ್ಳಿ […]

ಪದೇ ಪದೇ ಹೈಟೆನ್ಷನ್ ಅವಘಡ : ನಿವಾಸಿಗಳಿಗೆ ಬೆಸ್ಕಾಂ ನೋಟೀಸ್

ಬೆಂಗಳೂರು,ಡಿ.2- ಹೈಟೆನ್ಷನ್ ವೈರ್‍ನಿಂದ ಪದೇ ಪದೇ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ನಗರದ ಹಲವು ನಿವಾಸಿಗಳಿಗೆ ನೋಟೀಸ್ ನೀಡಿದೆ. ಹೈಟೆನ್ಷನ್ ವೈರ್‍ಗಳ ಕೆಳಗೆ ಮನೆ ನಿರ್ಮಿಸಿರುವವರಿಗೆ ನೋಟಿಸ್ ನೋಡಿ ಮನೆ ಖಾಲಿ ಮಾಡುವಂತೆ ಸೂಚನೆ ನೀಡಿದೆ. ನಿನ್ನೆ ನಂದಿನಿ ಲೇಔಟ್‍ನಲ್ಲಿ ಬಾಲಕರಿಬ್ಬರು ಪಾರಿವಾಳ ಹಿಡಿಯಲು ಹೈಟೆನ್ಷನ್ ವೈರ್ ತಗುಲಿ ಗಾಯಗೊಂಡು ಚಿಂತಾಜನಕ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಘಟನೆಗಳು ಹಲವೆಡೆ ನಡೆದಿವೆ. ಬೆಸ್ಕಾಂ, ಬಿಬಿಎಂಪಿ ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ನೋಟಿಸ್ ನೀಡಿತ್ತು. ಆದರೆ ನಿವಾಸಿಗಳು ನಾವು ಮನೆ ಖಾಲಿ […]

90 ಮೀ. ಎತ್ತರದ ಏರಿಯಲ್ ಲ್ಯಾಡರ್ ವಾಹನಗಳಿಗೆ ಚಾಲನೆ

ಬೆಂಗಳೂರು,ಅ.20- ಅತಿ ಎತ್ತರದ ಕಟ್ಟಡಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಅನಾಹುತ ಉಂಟಾದಾಗ ತಕ್ಷಣವೇ ರಕ್ಷಣೆಗೆ ಧಾವಿಸುವ ಏರಿಯಲ್ ಲ್ಯಾಡರ್ ಫ್ಲಾಟ್‍ಫಾರ್ಮ್ ವಾಹನಗಳನ್ನು ವಿದ್ಯುಕ್ತವಾಗಿ ಲೋಕಾರ್ಪಣೆ ಮಾಡಲಾಯಿತು. ವಿಧಾನಸೌಧ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರಗ ಜ್ಞಾನೇಂದ್ರ, ಕೋಟಾ ಶ್ರೀನಿವಾಸಪೂಜಾರಿ, ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಜನೀಶ್ ಗೋಯಲ್, ಅಗ್ನಿಶಾಮಕ ಪಡೆಯ ಡಿಐಜಿ ಅಮರ್‍ಕುಮಾರ್ ಪಾಂಡೆ ಮತ್ತಿತರರು ವಾಹನಗಳನ್ನು ಲೋಕಾರ್ಪಣೆಗೊಳಿಸಿದರು. ಪ.ಜಾ ಹಾಗೂ ಪ.ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿ ಸುಗ್ರೀವಾಜ್ಞೆ ಜಾರಿ ಮುಂಬೈ ಹೊರತುಪಡಿಸಿದರೆ ಏರಿಯಲ್ ಲ್ಯಾಡರ್ […]

ವೀಸಾಗಳಿಗಾಗಿ ಕಾಯುವ ಸಮಯ ಕಡಿಮೆ ಮಾಡಲು ಕ್ರಮ : ಕೆನಡಾದ ಹೈಕಮಿಷನ್

ನವದೆಹಲಿ ಆ.19 – ವೀಸಾಗಳಿಗಾಗಿ ಹೆಚ್ಚಿನ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು ದೀರ್ಘಾವಧಿ ಕಾಯುವ ಸಮಯ ಕಡಿತಗೊಳಿಸಿ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮ ಕೃಗೊಳ್ಳಲಾಗುತ್ತಿದೆ ಎಂದು ಕೆನಡಾ ಹೈಕಮಿಷನ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಕೆನಡಾದ ಹೈ ಕಮಿಷನ್, ಸರಣಿ ಟ್ವೀಟ್ ಮಾಡಿದ್ದು ಪ್ರತಿ ವಾರ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ತಮ್ಮ ವೀಸಾಗಳನ್ನು ಪಡೆಯುತ್ತಿದ್ದಾರೆ ಮತ್ತು ಕಾಯುವ ಸಮಯವನ್ನು ಕಡಿಮೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುಲಾಗುತ್ತದೆ ಎಂದು ಹೇಳಿದೆ. ನಿಮ್ಮ ಹತಾಶೆ ಮತ್ತು ನಿರಾಶೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು […]

ಭಾರತ – ಅಮೆರಿಕ ಮೆಗಾ ಮಿಲಿಟರಿ ಸಮರಾಭ್ಯಾಸ

ನವದೆಹಲಿ, ಆಗಸ್ಟï 4 – ವೇಗವಾಗಿ ವಿಕಸನಗೊಳ್ಳುತ್ತಿರುವ ಪ್ರಾದೇಶಿಕ ಭದ್ರತಾ ಸನ್ನಿವೇಶದ ಮಧ್ಯೆ ಭಾರತ ಮತ್ತು ಅಮೆರಿಕ ಅಕ್ಟೋಬರ್‍ನಲ್ಲಿ ಉತ್ತರಾಖಂಡದ ಔಲಿಯಲ್ಲಿ ಎರಡು ವಾರಗಳ ಕಾಲ ಮೆಗಾ ಮಿಲಿಟರಿ ಸಮರಾಭ್ಯಾಸ ನಡೆಸಲಿವೆ.18ನೇ ಆವೃತ್ತಿಯ ಯುದ್ಧ ಅಭ್ಯಾಸ ಅಕ್ಟೋಬರ್ 14 ರಿಂದ 31 ರವರೆಗೆ ನಡೆಯಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಹಲವಾರು ಸಂಕೀರ್ಣ ಕಸರತ್ತು ಯೋಜಿಸಲಾಗಿದೆ ಎಂದು ಅವರು ಹೇಳಿದರು. 2021 ರ ಅಕ್ಟೋಬರ್‍ನಲ್ಲಿ ಅಮೆರಿಕದ ಅಲಾಸ್ಕಾದಲ್ಲಿ ನಡೆದಿತ್ತು ಭಾರತ ಮತ್ತು ಅಮೆರಿಕ ಸೇನೆಗಳ ನಡುವೆ ತಿಳುವಳಿಕೆ, […]

ಕೆಆರ್‌ಎಸ್‌ನಿಂದ 75000 ಕ್ಯೂಸೆಕ್ ನೀರು ಬಿಡುಗಡೆ

ಮೈಸೂರು, ಜು.11- ಕಳೆದೊಂದು ವಾರದಿಂದ ಮಡಿಕೇರಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಕಾವೇರಿ ಜಲಾನಯನ ಪ್ರದೇಶದಲ್ಲಿ ಹರಿಯುತ್ತಿದೆ. ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜಸಾಗರ ಜಲಾಶಯದಿಂದ 75000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು ಶ್ರೀರಂಗಪಟ್ಟಣದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಐತಿಹಾಸಿಕ ವೆಲ್ಲೇಸ್ಲಿ ಸೇತುವೆಗೆ ತೆರಳುವ ಮಾರ್ಗದಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, ನದಿಯ ಬಳಿ ನಾಗರಿಕರು ತೆರಳದಂತೆ ಪ್ರವೇಶ ನಿರ್ಬಂಧಿಸಲಾಗಿದೆ. ಕೆಆರ್‌ಎಸ್‌ ಜಲಾಶಯದಲ್ಲಿ ಒಳಹರಿವಿನಿಲ್ಲಿ ಹೆಚ್ಚಳವಾಗಿದ್ದು, 50ಸಾವಿರ ಕ್ಯೂಸೆಕ್ ಹೆಚ್ಚಳವಾಗಿದೆ. ಜಲಾಶಯದ ಹೊರಹರಿವು ಕೂಡ ಭಾರೀ ಹೆಚ್ಚಳವಾಗಿದ್ದು 75000ಕ್ಯೂಸೆಕ್ ನೀರನ್ನು ಬಿಡುಗಡೆ […]