ಪಂಜಾಬ್‍ನಲ್ಲಿ ಇಂಟರ್ನೆಟ್‌ ಸ್ಥಗಿತ : ಅಮೃತಪಾಲ್ ಬಂಧನಕ್ಕೆ ಶೋಧ

ಚಂಡೀಗಢ,ಮಾ.19- ತೀವ್ರಗಾಮಿ ಸಿಖ್ ನಾಯಕ ಹಾಗೂ ಖಲಿಸ್ತಾನ್ ಬೆಂಬಲಿತ ಪ್ರತ್ಯೇಕತವಾದಿ ಅಮೃತಪಾಲ್ ಸಿಂಗ್‍ರ ಬಂಧನಕ್ಕೆ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಅದರ ಬೆನ್ನಲ್ಲೆ ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಮಧ್ಯಾಹ್ನದವರೆಗೆ ರಾಜ್ಯಾದ್ಯಂ ಮೊಬೈಲ್ ಇಂಟರ್ನೆಟ್, ಎಸ್‍ಎಂಎಸ್ ಸೇವೆಗಳ ಅಮಾನತ್ತನ್ನು ವಿಸ್ತರಿಸಲಾಗಿದೆ. ನಿನ್ನೆ ದಿಡೀರ್ ಬೆಳವಣಿಗೆಯ ಬಳಿಕ ಶನಿವಾರದಿಂದ ಭಾನುವಾರ ಮಧ್ಯಾಹ್ನದವರೆಗೂ ಇಂಟರ್ನೆಟ್ ಮತ್ತು ಎಸ್‍ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇಂಡಿಯಾ ಟೆಲಿಗ್ರಾಫ್ ಆಕ್ಟ್ 1885 ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿ ಬ್ಯಾಂಕಿಂಗ್ ಮತ್ತು ಮೊಬೈಲ್ ರೀಚಾರ್ಜ್ ಹೊರತುಪಡಿಸಿ ಎಲ್ಲಾ ಮೊಬೈಲ್ […]