ಅಮೆರಿಕಾದಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಇಬ್ಬರ ಸಾವು

ವಾಷಿಂಗ್ಟನ್,ಫೆ.16- ಅಮೆರಿಕಾದಲ್ಲಿ ಸೇನಾ ಹೆಲಿಕಾಫ್ಟರ್ ಪತನಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ.ಅಮೆರಿಕದ ದಕ್ಷಿಣ ರಾಜ್ಯ ಅಲಬಾಮಾದ ಹೆದ್ದಾರಿಯೊಂದರ ಬಳಿ ಮಿಲಿಟರಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಕಾರಿಗಳು ತಿಳಿಸಿದ್ದಾರೆ. ಹೆಲಿಕಾಪ್ಟರ್ ಟೆನ್ನೆಸ್ಸೀ ನ್ಯಾಷನಲ್ ಗಾರ್ಡ್‍ಗೆ ಸೇರಿದ್ದು, ತರಬೇತಿ ಹಾರಾಟದಲ್ಲಿದ್ದಾಗ ಹಂಟ್ಸ್‍ವಿಲ್ಲ್ ನಗರದ ಬಳಿ ಮಧ್ಯಾಹ್ನದ ವೇಳೆ ಪತನಗೊಂಡಿದೆ ಎಂದು ತಿಳಿದುಬಂದಿದೆ. ನ್ಯಾಷನಲ್ ಗಾರ್ಡ್ ಒಂದು ರಾಜ್ಯ ಆಧಾರಿತ ಮಿಲಿಟರಿ ಪಡೆಯಾಗಿದ್ದು, ಫೆಡರಲ್ ಕಾರ್ಯಾಚರಣೆಗಳಿಗಾಗಿ ಸಕ್ರಿಯಗೊಳಿಸಲಾಗಿದ್ದು, ಇದು ಅಮೆರಿಕ ಮಿಲಿಟರಿ ಪಡೆಯ ಮೀಸಲು ಭಾಗವಾಗಿದೆ. ಇಬ್ಬರು ಟೆನ್ನೆಸ್ಸೀ […]