ಮತ್ತೆ ರೆಪೊ ದರ ಏರಿಸಿದ ಆರ್‌ಬಿಐ, ಹೆಚ್ಚಾಗಲಿದೆ ಬ್ಯಾಂಕ್ ಬಡ್ಡಿ

ನವದೆಹಲಿ,ಫೆ.8- ಭವಿಷ್ಯದಲ್ಲಿ ಹಣದುಬ್ಬರವನ್ನು ನಿಯಂತ್ರಣ ಮಾಡಲು ಕಠಿಣ ಕ್ರಮಗಳನ್ನು ಮುಂದುವರೆಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ರೇಪೋ ದರವನ್ನು 25 ಕನಿಷ್ಠ ಅಂಶಗಳ ಆಧಾರದ ಮೇಲೆ ಶೇ.6.5ರಷ್ಟು ಹೆಚ್ಚಳ ಮಾಡಿದೆ. ಇದರಿಂದ ಬ್ಯಾಂಕ್‍ಗಳ ಸಾಲಗಳ ಮೇಲೆ ಬಡ್ಡಿ ಮತ್ತಷ್ಟು ಏರಿಕೆಯಾಗಲಿದೆ. ಈ ಮೊದಲು ನಾಲ್ಕು ಬಾರಿ ಆರ್‌ಬಿಐ ರೇಪೋವನ್ನು ಸರ್ವಾನುಮತದಿಂದ ಪರಿಷ್ಕರಣೆ ಮಾಡಿದೆ. ಇದೇ ಮೊದಲ ಬಾರಿಗೆ ಕೇಂದ್ರ ಬ್ಯಾಂಕ್‍ನ ವಿತ್ತಿ ನಿರ್ವಹಣಾ ಸಮಿತಿ (ಎಂಪಿಸಿ) ಸದಸ್ಯರಲ್ಲಿ ಅಪಸ್ವರಗಳು ಕೇಳಿ ಬಂದಿವೆ. ಆರು ಮಂದಿ ಸದಸ್ಯರ ಪೈಕಿ […]

ಅಮೂಲ್‍ನ ಹಾಲಿನ ದರ 3 ರೂ. ಹೆಚ್ಚಳ

ನವದೆಹಲಿ,ಫೆ.3- ಅಮೂಲ್‍ನ ಹಾಲಿನ ದರದಲ್ಲಿ ಇಂದಿನಿಂದ 3 ರೂ. ಏರಿಕೆ ಆಗಿದೆ ಎಂದು ಗುಜರಾತ್ ಡೈರಿ ಕೋ ಅಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ ಆದೇಶ ಹೊರಡಿಸಿದೆ. ಹೊಸ ದರ ಪರಿಷ್ಕರಣೆಯ ಪ್ರಕಾರ ಒಂದು ಲೀಟರ್ ಅಮೂಲ್ ತಾಜಾ ಹಾಲಿನ ದರವು 54 ರೂ.ಗೆ ಏರಿಕೆಯಾಗಿದ್ದರೆ, ಅಮೂಲ್ ಎ 2 ಎಮ್ಮೆ ಹಾಲಿನ ದರವು ಲೀಟರ್‍ಗೆ 70 ರೂ. ಮುಟ್ಟಿದೆ. ಕಳೆದ ಅಕ್ಟೋಬರ್‍ನಲ್ಲಷ್ಟೇ ಗುಜರಾತ್ ಕೋ ಅಪರೇಟಿವ್ ಹಾಲಿನ ಮಾರ್ಕೆಟಿಂಗ್ ಫೆಡರೇಷನ್ ಗೋಲ್ಡ್, ತಾಜಾ ಮತ್ತು ಶಕ್ತಿ ಬ್ರಾಂಡ್‍ನ […]

ದುಬಾರಿಯಾದ ಬಡ್ಡಿದರ, ಸಾಲದ ಸುಳಿಯಲ್ಲಿ ಜನಸಾಮಾನ್ಯರ ನರಳಾಟ

ಬೆಂಗಳೂರು,ಆ.8-`ದುರ್ಭಿಕ್ಷದಲ್ಲಿ ಅಧಿಕಮಾಸ’ ಎಂಬಂತೆ ಕೋವಿಡ್, ಹಣದುಬ್ಬರ, ನಿರುದ್ಯೋಗ ಹೆಚ್ಚಳ, ದುಬಾರಿ ವೆಚ್ಚಗಳ ನಡುವೆ ಬ್ಯಾಂಕ್ ಬಡ್ಡಿ ದರ ಏರಿಕೆ ಮಧ್ಯಮ ವರ್ಗ ಹಾಗೂ ಬಡವರನ್ನು ಶೋಷಿಸಲಾರಂಭಿಸಿದೆ.ಆರ್‍ಬಿಐನ ವಿತ್ತ ನಿರ್ವಹಣಾ ಸಮಿತಿಯಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ನಿರಂತರವಾಗಿ ಮೂರು ಬಾರಿ ರೆಪೊ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಇದರಿಂದ ಬ್ಯಾಂಕ್‍ಗಳ ಸಾಲದ ಬಡ್ಡಿದರ ಶೇ.1.4ರಷ್ಟು ಹೆಚ್ಚಾಗಿದೆ. ಕೋವಿಡ್ ವೇಳೆ ಜನಜೀವನ, ಆರ್ಥಿಕ ಚಟುವಟಿಕೆಗಳು, ಉತ್ಪಾದನೆ, ಜೀವನೋಪಾಯ ಪರಿಸ್ಥಿತಿ ಪಾಶ್ರ್ವವಾಯು ಪೀಡಿತವಾಗಿದ್ದವು. ಪದೇ ಪದೇ ಮೂರನೇ ಅಲೆ, 4ನೇ ಅಲೆ […]