ತಿರುಪತಿ-ತಿರುಮಲದಲ್ಲಿ ತಲೆ ಎತ್ತುತ್ತಿದೆ ಸುಸಜ್ಜಿತ ಕರ್ನಾಟಕ ಭವನ
ತಿರುಪತಿ,ಜು.12- ರಾಜ್ಯದಿಂದ ಆಗಮಿಸುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತಿರುಪತಿ-ತಿರುಮಲದಲ್ಲಿ ರಾಜ್ಯ ಸರ್ಕಾರ ನಿರ್ಮಾಣ ಮಾಡುತ್ತಿರುವ ಸುಸಜ್ಜಿತ ಕರ್ನಾಟಕ ಭವನ ಮುಂದಿನ ಫೆಬ್ರವರಿ ತಿಂಗಳಿನಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಿರಲಿದೆ. ಸುಮಾರು 236 ಕೋಟಿ ರೂ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಗೊಳ್ಳಲಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳುಳ್ಳ ಕರ್ನಾಟಕ ಭವನದಲ್ಲಿ ಒಟ್ಟು 236 ಕೊಠಡಿಗಳು ಇರಲಿದ್ದು, ಇದರಲ್ಲಿ ಅತಿ ಗಣ್ಯರು ( ವಿವಿಐಪಿ), ಗಣ್ಯರು ( ವಿಐಪಿ) ಹಾಗೂ ಜನಸಾಮಾನ್ಯರಿಗೆ ಪ್ರತ್ಯೇಕವಾಗಿ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ. ತಿರುಮಲ – […]