ಮತ್ತೊಂದು ವಿವಾದ : `ಹಿಂದೂ’ ಶಬ್ದದ ಸತ್ಯಶೋಧನೆಗೆ ಮುಂದಾದ ಸತೀಶ್

ಬೆಂಗಳೂರು, ನ.10- ಪಕ್ಷಕ್ಕೆ ಹಾನಿಯಾಗಬಾರದು ಎಂಬ ಕಾರಣಕ್ಕೆ ನಾನು ನನ್ನ ಹೇಳಿಕೆಯನ್ನು ಹಿಂಪಡೆದಿದ್ದೇನೆ. ಆದರೆ ಮುಂದಿನ ದಿನಗಳಲ್ಲಿ ನನ್ನ ಮಾತುಗಳನ್ನು ಸಾಬೀತು ಪಡಿಸಲು ಪ್ರಯತ್ನಿಸುತ್ತೇನೆ. ಇದಕ್ಕೆ ಸಂಬಂಧ ಪಟ್ಟಂತೆ ಇತಿಹಾಸಕಾರರನ್ನು ಭೇಟಿಯಾಗುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಖಾಸಗಿ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ್ದೇನೆ. ಅದು ಇಷ್ಟು ದೊಡ್ಡ ವಿವಾದವಾಗಲಿದೆ ಎಂದು ಭಾವಿಸಿರಲಿಲ್ಲ. ಆದರೂ ಆಗಿ ಹೋಗಿದೆ. ಸತ್ಯಾಂಶ ಬಿಟ್ಟು ಏನೋನೋ ತಿರುಚಿ ವರದಿಯಾಗಿದೆ. ನಾನೊಬ್ಬನ್ನೇ ಆಗಿದ್ದರೆ ಕ್ಷಮೆ ಕೇಳುತ್ತಿರಲಿಲ್ಲ. […]