ವಸುದೈವ ಕುಟುಂಟ ಪರಿಕಲ್ಪನೆಯ ಭಾರತದಲ್ಲಿ ಹಿಟ್ಲರ್ ಹುಟ್ಟಲು ಸಾಧ್ಯವಿಲ್ಲ : ಭಾಗವತ್

ನವದೆಹಲಿ,ಸೆ.24- ನಮ್ಮದು ವಸುದೈವ ಕುಟಂಬ ಪರಿಕಲ್ಪನೆ ಹೀಗಾಗಿ ನಮ್ಮಿಂದ ಯಾವುದೇ ದೇಶಕ್ಕೆ ಬೆದರಿಕೆ ಹಾಕುವ ಪ್ರಶ್ನೆಯೇ ಇಲ್ಲ ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. ಸಂಕಲ್ಪ್ ಫೌಂಡೇಷನ್ ಆಯೋಜಿಸಿದ್ದ ಉಪನ್ಯಾಸ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದಿಂದ ಯಾವುದೆ ದೇಶಕ್ಕೆ ಬೆದರಿಕೆ ಒಡ್ಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ರಾಷ್ಟ್ರೀಯತೆಯು ಇತರರಿಗೆ ಯಾವುದೇ ಬೆದರಿಕೆಯನ್ನು ಉಂಟುಮಾಡುವುದಿಲ್ಲ . ಅದು ನಮ್ಮ ಸ್ವಭಾವವಲ್ಲ. ನಮ್ಮ ರಾಷ್ಟ್ರೀಯತೆಯು ಪ್ರಪಂಚವೆ ಒಂದು ಕುಟುಂಬ ಎಂಬ ವಸುದೈವ ಕುಟುಂಬದ […]