ಆಸ್ಪತ್ರೆಗೆ ಬಾರದೆ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ 8 ಲಕ್ಷ ಮಂದಿ ಸೋಂಕಿತರು

ಬೆಂಗಳೂರು,ಜ.17-ನಗರದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದರೂ ಆಸ್ಪತ್ರೆಗಳು ಮಾತ್ರ ಖಾಲಿ ಖಾಲಿ. ಯಾಕೆ ಅಂತ ಅಚ್ಚರಿಪಡುತ್ತಿದ್ದೀರಾ… ಇಲ್ಲಿದೆ ನೋಡಿ ಸಿಕ್ರೇಟ್! ಸೋಂಕಿನ ಲಕ್ಷಣ ಹಾಗೂ ಸೋಂಕು ಕಾಣಿಸಿಕೊಂಡ ಬಹುತೇಕ ಮಂದಿ ಆಸ್ಪತ್ರೆಗಳಿಗೆ ತೆರಳುವ ಬದಲು ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿರುವುದರಿಂದ ಇಂತಹ ಪರಿಸ್ಥಿತಿ ಬಂದಿದೆ. ಸಿಲಿಕಾನ್ ಸಿಟಿಯಲ್ಲಿ ಬರೊಬ್ಬರಿ ಎಂಟು ಲಕ್ಷ ಮಂದಿ ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಹೋಂ ಐಸೋಲೇಷನ್‍ನಲ್ಲಿರುವವರ ಮೇಲೆ ನಿಗಾ ಇಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಹೋಂ ಐಸೋಲೇಷನ್ ನೋಡಲ್ ಅಧಿಕಾರಿಯಾಗಿ ಪಂಕಜ್‍ಕುಮಾರ್ ಪಾಂಡೆ […]