ಬೆಳಗಾವಿಯಲ್ಲಿ ಸದ್ದು ಮಾಡುತ್ತಿದೆ ಮತ್ತೊಂದು ಹನಿ ಟ್ರ್ಯಾಪ್ ಪ್ರಕರಣ

ಬೆಳಗಾವಿ/ಬೆಂಗಳೂರು, ಜು.19: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೊಂದು ಹನಿ ಟ್ರ್ಯಾಪ್ ಪ್ರಕರಣ ಸದ್ದು ಮಾಡುತ್ತಿದೆ. ಉತ್ತರದಿಂದ ದಕ್ಷಿಣಕ್ಕೆ ಹರಡಿರುವ ಈ ಪ್ರಕರಣದಲ್ಲಿ ಯುವ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿರುವ ಯುವತಿ ಹೆಸರು ತಳಕು ಹಾಕಿಕೊಂಡಿದ್ದು, ನೊಂದ ವ್ಯಕ್ತಿ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಗೆ ಆದ ಚಿತ್ರಹಿಂಸೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪ್ರಸ್ತುತ ಚನ್ನಪಟ್ಟಣದಲ್ಲಿ ಪ್ರಭಾವಿ ಯುವ ಕಾಂಗ್ರೆಸ್ ನಾಯಕಿಯಾಗಿರುವ ಆಕೆ ಘಟಾನುಘಟಿ ನಾಯಕಿಯರೊಂದಿಗೆ ಕಾಣಿಸಿಕೊಂಡಿರುವ ಮತ್ತು ದೂರು ದಾರನ ಜೊತೆ ಇದ್ದ ಫೋಟೋಗಳು ವೈರಲ್ ಆಗಿದ್ದು ಭಾರೀ ಕುತೂಹಲ ಕೆರಳಿಸಿದೆ.ಈಕೆಯ […]