ರಾಷ್ಟ್ರಪತಿ ದ್ರೌಪದಿ ಮುರ್ಮು ಪೌರ ಸನ್ಮಾನಕ್ಕೆ ಹುಬ್ಬಳ್ಳಿಯಲ್ಲಿ ಸಕಲ ಸಿದ್ಧತೆ
ಹುಬ್ಬಳ್ಳಿ,ಸೆ.21- ಇಡೀ ದೇಶಕ್ಕೆ ಶಾಂತಿಯ ಸಂದೇಶ ಸಾರುವ ನಾಡು, ವಾಣಿಜ್ಯ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹುಬ್ಬಳ್ಳಿಯಲ್ಲಿ ದೇಶದ ಪ್ರಥಮ ಪ್ರಜೆ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸಲು ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತ್ತಿದೆ.ಸುಮಾರು ಮೂರುವರೆ ದಶಕಗಳ ಬಳಿಕ ರಾಷ್ಟ್ರಪತಿಯವರಿಗೆ ಪೌರಸನ್ಮಾನ ನೀಡುತ್ತಿದ್ದು, ಎರಡನೇ ಬಾರಿಗೆ ರಾಷ್ಟ್ರದ ಪ್ರಥಮ ಪ್ರಜೆಗೆ ಪೌರಸನ್ಮಾನ ಮಾಡುವ ಭಾಗ್ಯವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪಡೆದುಕೊಂಡಿದೆ ಎಂಬುದು ಹೆಮ್ಮೆ ಮೂಡಿಸಿದೆ. ಸೆ.26ರಂದು ಆಗಮಿಸುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ಸಲ್ಲಿಸಲು ದೇಶಪಾಂಡೆ ನಗರದ […]
‘ಇಂಜಿನಿಯರ್ಸ್ ಡೇ’ : ಪ್ರಧಾನಿ ಮೋದಿ ಶುಭಾಶಯ
ನವದೆಹಲಿ, ಸೆ 15 – ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ನುರಿತ ಮತ್ತು ಪ್ರತಿಭಾವಂತ ಇಂಜಿನಿಯರ್‍ಗಳ ಸಮೂಹವನ್ನು ಹೊಂದಿರುವ ಭಾರತ ಪುನೀತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಂಜಿನಿಯರ್ ದಿನವಾದ ಇಂದು ಜನತೆಗೆ ಶುಭಾಶಯ ಕೋರಿರುವ ಅವರು, ಎಂಜಿನಿಯರಿಂಗ್ ಕೆಲಸಗಳ ಪ್ರವರ್ತಕರಿಗೆ ಮನ್ನಣೆ ನೀಡಿದ ಹಿಂದಿನ ಮೈಸೂರು ಸಾಮ್ರಾಜ್ಯದ ಅರಸರು ಮತ್ತು ದಿವಾನರಾಗಿದ್ದ ಭಾರತರತ್ನ ಮೇದಾವಿ ಇಂಜಿನಿಯರ್ ರಾಜನೀತಿಜ್ಞ ಎಂ.ವಿಶ್ವೇಶ್ವರಯ್ಯಅವರನ್ನು ಸ್ಮರಿಸಿ ಅವರ ಜನ್ಮದಿನವನ್ನು ಎಂಜಿನಿಯರ್ ದಿನ ಆಚರಿಸಲಾಗುತ್ತದೆ. ಎಲ್ಲ ಎಂಜಿನಿಯರ್‍ಗಳಿಗೆ ಶುಭಾಶಯಗಳು ಎಂದು […]