ಮಿತಿ ಮೀರಿದ ರಿಯಲ್ ಎಸ್ಟೇಟ್ ದಂಧೆ : ಶಾಲೆ-ಕಾಲೇಜುಗಳಿಗೆ ಜಾಗದ ಕೊರತೆ

ಬೆಂಗಳೂರು, ನ.24- ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಮಾಫಿಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ಭವಿಷ್ಯದಲ್ಲ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ಮತ್ತು ಸರ್ಕಾರಿ ಕಚೇರಿಗಳನ್ನು ಕಟ್ಟಲು ಭೂಮಿ ಸಿಗುವುದು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ 10-12 ವರ್ಷಗಳಲ್ಲಿ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ಮತ್ತು ಇತರ ಮೂಲಸೌಕರ್ಯಗಳನ್ನುನಿರ್ಮಿಸಲು ಭೂಮಿ ಲಭ್ಯವಾಗುವುದು ಕಷ್ಟಕರವಾಗಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಕಾರ್ಯಕ್ರಮದಲ್ಲಿ ಸಚಿವರು ಹಳ್ಳಿಯೊಂದರಲ್ಲಿ ಉಳಿದು ನಿವಾಸಿಗಳ […]

ಕೊನೆಯಾಗುತ್ತಿದೆಯಾ ಕೊರೋನಾ ಆರ್ಭಟ..?

ಬೆಂಗಳೂರು,ಜ.31-ಕೊರೊನಾ ಮೂರನೆ ಅಲೆ ಮಕ್ಕಳ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ ಎಂದು ಊಹಿಸಲಾಗಿತ್ತು. ಆದರೆ, ಇದೀಗ ಮೂರನೆ ಅಲೆ ಸದ್ದುಗದ್ದಲವಿಲ್ಲದೆ ಜಾಗ ಖಾಲಿ ಮಾಡತೊಡಗಿದೆ. ಫೆಬ್ರವರಿ ಮೂರನೆ ವಾರದಿಂದ ಮೂರನೆ ಅಲೆ ಅಬ್ಬರ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು. ಇದೀಗ ಕಳೆದ ಒಂದು ವಾರದಲ್ಲಿ 2ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿರುವುದರಿಂದ ಮೂರನೇ ಅಲೆ ಅಂತ್ಯದ ಕಡೆ ಮುಖ ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜನವರಿ ಕೊನೆಯ ವಾರದಿಂದ ಶುರುವಾಗಿ ಫೆಬ್ರವರಿ ಮೊದಲ ವಾರದಲ್ಲೇ ಮೂರನೇ ಅಲೆ ಇಳಿಕೆ ಕಾಣುತ್ತಿದೆ.ಇದಕ್ಕೆ […]

ಆಸ್ಪತ್ರೆಗೆ ಬಾರದೆ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ 8 ಲಕ್ಷ ಮಂದಿ ಸೋಂಕಿತರು

ಬೆಂಗಳೂರು,ಜ.17-ನಗರದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದರೂ ಆಸ್ಪತ್ರೆಗಳು ಮಾತ್ರ ಖಾಲಿ ಖಾಲಿ. ಯಾಕೆ ಅಂತ ಅಚ್ಚರಿಪಡುತ್ತಿದ್ದೀರಾ… ಇಲ್ಲಿದೆ ನೋಡಿ ಸಿಕ್ರೇಟ್! ಸೋಂಕಿನ ಲಕ್ಷಣ ಹಾಗೂ ಸೋಂಕು ಕಾಣಿಸಿಕೊಂಡ ಬಹುತೇಕ ಮಂದಿ ಆಸ್ಪತ್ರೆಗಳಿಗೆ ತೆರಳುವ ಬದಲು ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿರುವುದರಿಂದ ಇಂತಹ ಪರಿಸ್ಥಿತಿ ಬಂದಿದೆ. ಸಿಲಿಕಾನ್ ಸಿಟಿಯಲ್ಲಿ ಬರೊಬ್ಬರಿ ಎಂಟು ಲಕ್ಷ ಮಂದಿ ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಹೋಂ ಐಸೋಲೇಷನ್‍ನಲ್ಲಿರುವವರ ಮೇಲೆ ನಿಗಾ ಇಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಹೋಂ ಐಸೋಲೇಷನ್ ನೋಡಲ್ ಅಧಿಕಾರಿಯಾಗಿ ಪಂಕಜ್‍ಕುಮಾರ್ ಪಾಂಡೆ […]