ಮನೆ ಕೆಲಸಕ್ಕೆ ಸೇರಿ ಚಿನ್ನಾಭರಣ ದೋಚಿದ್ದ ಮುಂಬೈನ ಮೂವರು ಕಳ್ಳಿಯರು ಸೆರೆ

ಬೆಂಗಳೂರು,ಜು.11-ಫೇಸ್‍ಬುಕ್‍ನ ಪಬ್ಲಿಕ್ ಗ್ರೂಪ್‍ನಲ್ಲಿ ನಕಲಿ ಖಾತೆ ತೆರೆದು ನಕಲಿ ವಿವರಗಳನ್ನು ನೀಡುವ ಮೂಲಕ ಮನೆಕೆಲಸಗಾರರು ಲಭ್ಯವಿದ್ದಾರೆಂಬ ಜಾಹಿರಾತು ನೀಡಿ ನಂತರ ಮನೆಕೆಲಸಕ್ಕೆ ಸೇರಿಕೊಂಡು ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಮುಂಬೈನ ಮೂವರು ಮಹಿಳೆಯರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಪ್ರಿಯಾಂಕ ರಾಜೇಶ್ ಮೊಗ್ರೆ(29), ಮಹಾದೇವಿ(26) ಮತ್ತು ನವೀಮುಂಬೈನ ವನಿತ(37) ಬಂಧಿತ ಮಹಿಳೆಯರು. ಇವರಿಂದ ಬಂಗಾರದ ಒಡವೆಗಳು ಹಾಗೂ ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ನಿವಾಸಿ ಸುಬ್ಬಲಕ್ಷ್ಮಿ ಎಂದು ಸುಳ್ಳು ವಿವರಗಳನ್ನು ನೀಡಿ ಅರವಿಂದ ಎಂಬುವರ […]