ಮತ್ತೆ ಮುನ್ನೆಲೆಗೆ ಬಂದ ಸಿದ್ದು ದುಬಾರಿ ವಾಚ್ ವಿವಾದ

ಬೆಂಗಳೂರು,ಸೆ.13- ಪಿಎಸ್‍ಐ ನೇಮಕಾತಿ ಅಕ್ರಮ ಹಾಗೂ 40% ಕಮೀಷನ್ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ ಮತ್ತೆ ಹೊಬ್ಲೆಟ್ ವಾಚ್ ವಿವಾದವನ್ನು ಮುಂದಿಡಲು ತೀರ್ಮಾನಿಸಿದೆ. ಪ್ರವಾಹ ಭ್ರಷ್ಟಾಚಾರ ಇನ್ನಿತರೆ ವಿಷಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಹಣಿಯಲು ಯತ್ನಿಸುತ್ತಿರುವ ವಿಪಕ್ಷ ಕಾಂಗ್ರೆಸ್‍ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ದುಬಾರಿ ಹೊಬ್ಲೊಟ್ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸುವಂತೆ ಪಟ್ಟುಹಿಡಿದು ಒತ್ತಾಯಿಸಲಿದೆ. 2016ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದ ಹೊಬ್ಲೋಟ್ ವಾಚ್ ಉಡುಗೊರೆ ಪ್ರಕರಣವನ್ನು […]