ಮಿಜೋರಾಂನಲ್ಲಿ ಭಾರಿ ಪ್ರಮಾಣದ ಸ್ಪೋಟಕ ವಶಕ್ಕೆ ಪಡೆದ ಎನ್‍ಐಎ

ನವದೆಹಲಿ, ನ.23- ಮಿಜೋರಾಂನಲ್ಲಿ ಪತ್ತೆಯಾದ ಭಾರಿ ಪ್ರಮಾಣದ ಸ್ಪೋಟಕ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಜ್ವಾಲಿನ್‍ನಲ್ಲಿ ಲಾಲ್ರಿಂಗ್ಸಂಗ (54) ಎಂಬುವನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ 21 ರಂದು ಮಿಜೋರಾಂನ ಟಿಪಾದ ಬಳಿ ವಾಹನದಲ್ಲಿ ಸಾಗಿಸುತ್ತಿದ್ದ 2,421 ಕೆಜಿ ಸ್ಪೋಟಕಗಳು, 1,000 ಡಿಟೋನೇಟರ್‍ಗಳು, 4,500 ಮೀಟರ್ ಸ್ಪೋಟಿಸುವ ಫ್ಯೂಸ್ ವಯರ್ ಮತ್ತು – 73,500 ರೂ ನಗದು ಮತ್ತು 9.35 ಲಕ್ಷ ಮ್ಯಾನ್ಮಾರ್ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು […]