ಮೇಘಾಲಯದಲ್ಲಿ ಗೋಮಾಂಸ ಭಕ್ಷಣೆಗೆ ಬಿಜೆಪಿ ಅಡ್ಡಿಪಡಿಸಲ್ಲ

ಶಿಲ್ಲಾಂಗ್, ಫೆ.23- ಮೇಘಾಲಯದಲ್ಲಿ ಗೋಮಾಂಸ ಭಕ್ಷಣೆಗೆ ಯಾವುದೇ ನಿರ್ಬಂಧವಿಲ್ಲ ಮತ್ತು ತಾನೂ ಕೂಡ ಗೋಮಾಂಸ ಸೇವಿಸುತ್ತೇನೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಧ್ಯಕ್ಷ ಅರ್ನೆಸ್ಟ್ ಮಾವ್ರಿ ಸ್ಪಷ್ಟಪಡಿಸಿದ್ದಾರೆ. ಬೇರೆ ರಾಜ್ಯಗಳು ಅಂಗೀಕರಿಸಿದ ನಿರ್ಣಯದ ಬಗ್ಗೆ ನಾನು ಹೇಳಿಕೆ ನೀಡಲು ಸಾಧ್ಯವಿಲ್ಲ. ನಾವು ಮೇಘಾಲಯದಲ್ಲಿದ್ದೇವೆ, ಎಲ್ಲರೂ ಗೋಮಾಂಸ ತಿನ್ನುತ್ತಾರೆ ಮತ್ತು ಯಾವುದೇ ನಿರ್ಬಂಧವಿಲ್ಲ. ಹೌದು, ನಾನು ಕೂಡ ಗೋಮಾಂಸ ತಿನ್ನುತ್ತೇನೆ. ಯಾವುದೇ ನಿಷೇಧವಿಲ್ಲ. ಮೇಘಾಲಯ ಇದು ಜನರ ಜೀವನಶೈಲಿ, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಮಾಧ್ಯಮವೊಂದಕ್ಕೆ […]