ಕೊನೆ ಬಾರಿಗೆ ಮಗನ ಮುಖನೋಡಬೇಕು ; ನವೀನ್ ಪೋಷಕರು, ಸಂಬಂಧಿಕರ ಕಣ್ಣೀರು

ಹಾವೇರಿ,ಮಾ.2- ರಷ್ಯಾದ ಕ್ಷಿಪಣಿ ದಾಳಿಗೆ ಬಲಿಯಾದ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ಮೃತದೇಹವನ್ನು ತಾಯ್ನಾಡಿಗೆ ಕರೆಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ. ಘಟನೆ ನಡೆದು ಈಗಾಗಲೇ 24 ಗಂಟೆ ಕಳೆದಿದ್ದು, ಉಕ್ರೇನ್‍ನ ಕರ್ಕೀವ್‍ನಲ್ಲಿರುವ ನವೀನ್ ಗ್ಯಾನಗೌಡರ್ ಮೃತದೇಹವನ್ನು ಹುಟ್ಟೂರಿಗೆ ತರಲು ಕೇಂದ್ರ ಸರ್ಕಾರ ಉಭಯ ರಾಷ್ಟ್ರಗಳ ಮೇಲೆ ಒತ್ತಡ ಹಾಕಬೇಕೆಂದು ಮೃತನ ಕುಟುಂಬದವರು ಕಣ್ಣೀರಿಡುತ್ತಿದ್ದಾರೆ. ಮೃತ ನವೀನ್ ಗ್ಯಾನಗೌಡರ್ ಸಹೋದರ ಹರ್ಷ ಮಾತನಾಡಿ, ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು. ಆತನ ಜೊತೆಗೆ […]