ಬ್ರೇಕಿಂಗ್ : ಭಾರತದ ಮೇಲೆ ರಾಸಾಯನಿಕ ಅಸ್ತ್ರ ಪ್ರಯೋಗಿಸಿದ ಪಾಕ್..!

ನವದೆಹಲಿ, ಫೆ.26- ಗಡಿಭಾಗದಲ್ಲಿ ತಂಟೆ ತಕರಾರು ಮುಂದುವರೆಸಿರುವ ಪಾಕಿಸ್ತಾನ ಇದೇ ಮೊದಲ ಬಾರಿಗೆ ಭಾರತದತ್ತ ಡ್ರೋಣ್‍ನಲ್ಲಿ ರಾಸಾಯನಿಕ ಶಸ್ತ್ರಾಸ್ತ್ರವನ್ನು ಎಸೆದಿದೆ. ಉದಯಂಪುರದಲ್ಲಿ ಸುದ್ದಿಗೋಷ್ಠಿಯಲಿ ಮಾತನಾಡಿರುವ ಜಮ್ಮು ಕಾಶ್ಮಿರದ ಪೊಲೀಸ್ ಮಹಾನಿರ್ದೇಶಕ ದಿಲ್ ಬಾಗ್ ಸಿಂಗ್, ಶಾಂತಿ ಕದಡುವ ಸಲುವಾಗಿ ಪಾಕಿಸ್ತಾನದ ಡ್ರೋಣ್ ಗಳ ಮೂಲಕ ಪದೇ ಪದೇ ಗ್ರೆನೆಡ್, ಐಇಡಿ, ಪಿಸ್ತೂಲ್ ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಎಸೆಯಲಾಗುತ್ತಿದೆ. ಇದೇ ಮೊದಲ ಬಾರಿಗೆ ರಾಸಾಯನಿಕ ಮಿಶ್ರಿತ ದ್ರವ ಮಾದರಿಯ ಶಸ್ತ್ರಾಸ್ತ್ರವನ್ನು ಎಸೆಯಲಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನಿಯರು ಹಲವು ದಿನಗಳಿಂದಲೂ […]