ಬಾಂಗ್ಲಾ ಅಕ್ರಮ ನುಸಳುಕೋರರಿಗೆ 5 ವರ್ಷ ಜೈಲು ಶಿಕ್ಷೆ

ಧುಬ್ರಿ, ಆ.20- ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿದ ಇಬ್ಬರಿಗೆ ಅಸ್ಸಾಂನ ಜಿಲ್ಲಾ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಸ್ಸಾಂನ ಮಂಕಚರ್ ಜಿಲ್ಲೆಯ ದಕ್ಷಿಣ ಸಲ್ಮಾರದ ಜಿಲ್ಲಾ ನ್ಯಾಯಾಲಯ ಅಕ್ರಮ ನುಸುಳುಕೋರರಾದ ನಿರಂಜನ್ ಘೋಶ್ ಮತ್ತು ಅಬ್ದುಲ್ ಹೈ ಎಂಬುವರಿಗೆ ಐದು ವರ್ಷ ಶಿಕ್ಷೆ ಮತ್ತು ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದರೆ ಮತ್ತೆ ಆರು ತಿಂಗಳ ಕಾಲ ಶಿಕ್ಷೆ ಅನುಭವಿಸಲು ಸೂಚಿಸಲಾಗಿದೆ. 2021ರ ಮಾರ್ಚ್ 6ರಂದು ಅಬ್ದುಲ್ ಹೈ ಅವರನ್ನು […]

ಹೈಟಿ ದೇಶದ ವಲಸಿಗರಿದ್ದ ದೋಣಿ ಮುಳುಗಿ 17 ಮಂದಿ ಸಾವು..!

ಮೆಕ್ಸಿಕೋ,ಜು.25-ಹೈಟಿ ದೇಶದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಗುಚಿಬಿದ್ದು 15 ಮಹಿಳೆಯರು, ಇಬ್ಬರು ಮಕ್ಕಳು ಸೇರಿ 17 ಮಂದಿ ಸಾವನ್ನಪ್ಪಿರುವ ದುರಂತ ಸಂಭವಿಸಿದೆ. ಹೈಟಿ ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದಿಂದ ಬೇಸತ್ತು ಬೇರೆ ದೇಶಕ್ಕೆ ಜನ ಪಲಾಯನ ಮಾಡುತ್ತಿದ್ದು, ಪಲಾಯನದ ವೇಳೆ 60 ಜನರಿದ್ದ ಬೋಟ್ ನೀರಿನಲ್ಲಿ ಮುಳುಗಡೆಯಾಗಿ 17 ಜನ ಸಾವನ್ನಪ್ಪಿದ್ದಾರೆ. ಮೃತ ದೇಹಗಳನ್ನು ಈಗಾಗಲೇ ಪತ್ತೆಮಾಡಿದ್ದು, 25 ಜನರನ್ನು ರಕ್ಷಿಸಲಾಗಿದೆ. ನ್ಯೂಪ್ರಾವಿಡೆನ್ಸ್‍ನಿಂದ ಏಳು ಮೈಲಿ ದೂರದಲ್ಲಿ ದೋಣಿ ಮುಳುಗಡೆಯಾಗಿದ್ದು, ಇನ್ನು ಹಲವು ಮಂದಿ ನಾಪತ್ತೆಯಾಗಿದ್ದಾರೆ.ರಕ್ಷಿಸಲ್ಪಟ್ಟ ಜನರಿಗೆ ಚಿಕಿತ್ಸೆ […]