ಹಲವು ಯೋಜನೆಗಳಿಂದ ಕರಾವಳಿ ಪರಿಸರಕ್ಕೆ ಧಕ್ಕೆ : ಸಿಎಜಿ ವರದಿ ಆಕ್ಷೇಪ
ನವದೆಹಲಿ, ಆ.9- ಸ್ವಾಯತ್ತ ಸ್ಥಾನ-ಮಾನ ಹೊಂದಿರುವ ಕೇಂದ್ರ ಲೆಕ್ಕಪರಿಶೋಧಕರ ಸಂಸ್ಥೆ (ಸಿಎಜಿ) ಸಂಸ್ಥೆ ಹೊಸ ವರದಿಯೊಂದು ನೀಡಿದ್ದು, ಅದರಲ್ಲಿ 2015 ರಿಂದ 2020ರ ನಡುವೆ ಅಸಮರ್ಪಕ ತಜ್ಞರ ವರದಿ ಪಾಲನೆ ಮಾಡಿ, ಪರಿಸರಕ್ಕೆ ಧಕ್ಕೆಯಾಗುವಂತೆ ಕರಾವಳಿ ತೀರದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂಬಆಕ್ಷೇಪ ವ್ಯಕ್ತ ಪಡಿಸಿದೆ. 2019ರಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿರುವ ಕರಾವಳಿ ವಲಯ ಸಂರಕ್ಷಣೆ ನಿಯಮಗಳ ಪ್ರಕಾರ ಸಮುದ್ರದ ಏರಿಳಿತಗಳ ರೇಖೆಯಿಂದ 500 ಮೀಟರ್ ಅಂತರದಲ್ಲಿ, ಕೆರೆಗಳು, ತೊರೆಗಳು, ನದಿಮುಖಗಳು, ಹಿನ್ನೀರಿನನಿಂದ ಕನಿಷ್ಠ 100 […]