ಆರ್.ಅಶೋಕ್ ಬದಲಿಗೆ ಮಂಡ್ಯ ಉಸ್ತುವಾರಿ ಹೊಣೆ ಗೋಪಾಲಯ್ಯ ಹೆಗಲಿಗೆ..?

ಬೆಂಗಳೂರು,ಫೆ.9- ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಅವರಿಗೆ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಅಬಕಾರಿ ಸಚಿವ ಗೋಪಾಲಯ್ಯ ಅವರಿಗೆ ಉಸ್ತುವಾರಿ ನೀಡಲು ಚಿಂತನೆ ನಡೆದಿದೆ. ಜಿಲ್ಲೆಯಲ್ಲಿ ಹೊತ್ತಿಕೊಂಡಿರುವ ಅಸಮಾಧಾನ ಈ ಕ್ಷಣದವರೆಗೂ ಶಮನಗೊಂಡಿಲ್ಲ. ಪಕ್ಷದ ಸಂಘಟನೆಗೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಅಶೋಕ್ ಅವರನ್ನು ಬದಲಾಯಿಸಲು ಪಕ್ಷದಲ್ಲಿ ಸಮಾಲೋಚಿಸಲಾಗಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಗೋಪಾಲಯ್ಯ ಅವರನ್ನು ಮಂಡ್ಯ ಜಿಲ್ಲೆಗೆ ನಿಯೋಜಿಸಿ ಅಶೋಕ್ ಅವರಿಗೆ ಬೇರೊಂದು ಜವಾಬ್ದಾರಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಮಾನಿಸಿದ್ದಾರೆ […]