ಹರ್ಷ ಕುಟುಂಬಕ್ಕೆ ಒಂದು ತಿಂಗಳ ವೇತನವನ್ನು ಪರಿಹಾರವಾಗಿ ನೀಡಿದ ಶಾಸಕ ಭರತ್ ಶೆಟ್ಟಿ

ಬೆಂಗಳೂರು,ಫೆ.22-ಶಿವಮೊಗ್ಗದಲ್ಲಿ ಹತ್ಯೆಗೀಡಾದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಅವರು ಒಂದು ತಿಂಗಳ ವೇತನವನ್ನು ನೀಡುವುದಾಗಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಮೃತ ಹರ್ಷವು ಭಜರಂಗದಳದ ಕಾರ್ಯಕರ್ತರಾಗಿದ್ದರು. ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದಾರೆ. ನಾವೆಲ್ಲರೂ ಹರ್ಷ ಅವರ ಮನೆಯವರೊಂದಿಗೆ ನಿಲ್ಲೋಣ. ಅವರ ಕುಟುಂಬಕ್ಕೆ ಆಸರೆಯಾಗೋಣ ಎಂದು ಹೇಳೀದ್ದಾರೆ. ನಾನು ಒಳ್ಳೆಯ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬದವರೊಂದಿಗೆ ನಿಲ್ಲಬೇಕು. ನಾನು ಒಂದು ತಿಂಗಳ ವೇತನ ಮತ್ತು ಭತ್ಯೆಯನ್ನು ಆತನ ಕುಟುಂಬಕ್ಕೆ ನೀಡುತ್ತೇನೆ […]