ಮಂಡ್ಯ ಉಸ್ತುವಾರಿ ಬದಲಾಯಿಸಿದ್ದೇಕೆ? ಬಿಜೆಪಿಯಲ್ಲೇ ಗಂಭೀರ ಚರ್ಚೆ

ಬೆಂಗಳೂರು,ಜ.27- ಕಾಂಗ್ರೆಸ್ ಮತ್ತು ಜೆಡಿಎಸ್‍ನ ಭದ್ರಕೋಟೆ ಎನಿಸಿದ ಸಕ್ಕರೆನಾಡು ಮಂಡ್ಯದಲ್ಲಿ ಬಿಜೆಪಿಯನ್ನು ಯಶಸ್ವಿಯಾಗಿ ಸಂಘಟಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರನ್ನು ಬದಲಾಯಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಗೋಪಾಲಯ್ಯ ಅವರನ್ನು ಬದಲಾಯಿಸಿ ಮಂಡ್ಯ ಉಸ್ತುವಾರಿಯನ್ನು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ನೀಡಿರುವುದಕ್ಕೆ ಸ್ವಪಕ್ಷದವರೇ ಬಹಿರಂಗವಾಗಿ ವಿರೋಧಿಸಿರುವುದು ಮಂಡ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಜಗಜ್ಜಾಹೀರವಾಗಿದೆ. ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ ಅವರು ಆರ್. ಅಶೋಕ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನಿಯೋಜನೆ ಮಾಡಿರುವುದಕ್ಕೆ ಬಹಿರಂಗವಾಗಿಯೇ ವಿರೋಧಿಸಿ ಗೋ ಬ್ಯಾಕ್ […]