ಬಲೂನ್ ಹಾರಾಟದ ಬೆನ್ನಲ್ಲೇ ಅಮೇರಿಕಾ ಕಾರ್ಯದರ್ಶಿ ಚೀನಾ ಪ್ರವಾಸ ಮುಂದೂಡಿಕೆ

ವಾಷಿಂಗ್‍ಟನ್,ಫೆ.4- ಅಮೇರಿಕಾದಲ್ಲಿ ಚೀನಾದ ಮತ್ತೊಂದು ಬೇಹುಗಾರಿಕೆಯ ಬಲೂನ್ ಹಾರಾಟದ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವಣ ಸಂಬಂದ ಮತ್ತಷ್ಟು ಹಳಸಲಾರಂಭಿಸಿದ್ದು, ಅಮೇರಿಕಾದ ಕಾರ್ಯದರ್ಶಿ ಚೀನಾ ಪ್ರವಾಸವನ್ನು ಮುಂದೂಡಿದ್ದಾರೆ. ಪೆಂಟಗಾನ್‍ನ ಪತ್ರಿಕಾ ಕಾರ್ಯದಶಿ ಬ್ರೀಗೆಡ್ ಜನರಲ್ ಪಟ್ ರೈಡರ್ ಹೇಳಿಕೆ ಈ ಬಗ್ಗೆ ನೀಡಿದ್ದು , ಲಾಟಿನ್ ಅಮೇರಿಕಾದಲ್ಲಿ ಮತ್ತೊಂದು ಬಲೂನ್ ಸಂಚರಿಸಿರುವ ವರದಿಗಳನ್ನು ನೋಡಿದ್ದು, ಅದು ಚೀನಾದ ಬಲೂನ್ ಎಂಬ ಅನುಮಾನವಿದೆ. ಸದ್ಯಕ್ಕೆ ತಮ್ಮ ಬಳಿ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಏಕಕಾಲಕ್ಕೆ 3 ಬಸ್‍ಗಳನ್ನು ಸಾಗಿಸಬಹುದಾದಷ್ಟು […]

ಪತ್ರಕರ್ತನ ಮೇಲೆ ಗುಂಡಿನ ದಾಳಿ

ಪಾಟ್ನಾ,ಜ.8- ಪತ್ರಕರ್ತರೊಬ್ಬರ ಮೇಲೆ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿರುವ ಪ್ರಕರಣ ಬಿಹಾರದ ಸಿವಾನ್‍ನಲ್ಲಿ ನಡೆದಿದೆ. ಸಿವಾನ್ ಜಿಲ್ಲೆಯ ಮಹಾರಾಜ್ ಗಂಜ್‍ನಲ್ಲಿ ಪತ್ರಕರ್ತ ರಾಜೇಶ್ ಅನಲ್ ಅವರ ಮೇಲೆ ಇಬ್ಬರು ಕ್ರಿಮಿನಲ್‍ಗಳು ಗುಂಡು ಹಾರಿಸಿದ್ದು, ಘಟನೆಯಲ್ಲಿ ಪತ್ರಕರ್ತ ತೀವ್ರವಾಗಿ ಗಾಯಗೊಂಡಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಕಚೇರಿ ಬಂದ್ ಮಾಡಿ ರಾಜೇಶ್ ಮನೆಗೆ ತೆರಳುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿದ್ದರಿಂದ ರಾಜೇಶ್ ಅವರ ಎಡತೊಡೆ ಮತ್ತು ತೋಳಿಗೆ ಗುಂಡು […]

ಸಣ್ಣ ಘಟನೆಯಾಗಿದ್ದರೂ ಮೇಲಾಧಿಕಾರಿಗಳಿಗೆ ವರದಿ ಮಾಡುವುದು ಕಡ್ಡಾಯ : ಏರ್ ಇಂಡಿಯಾ

ನವದೆಹಲಿ,ಜ.6- ಎರಡು ಕಹಿ ಘಟನೆಗಳ ಬಳಿಕ ಎಚ್ಚೆತ್ತುಕೊಂಡ ಏರ್ ಇಂಡಿಯಾ ಸಂಸ್ಥೆ, ವಿಮಾನದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಅದನ್ನು ಮೇಲಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಪ್ರಾಧಿಕಾರಗಳಿಗೆ ವರದಿ ಮಾಡುವಂತೆ ತನ್ನ ಸಿಬ್ಬಂದಿಗಳಿಗೆ ಕಟ್ಟಪ್ಪಣೆ ಮಾಡಿದೆ. ಏರ್‍ಇಂಡಿಯಾದ ಮುಖ್ಯಕಾರ್ಯನಿರ್ವಹಣಾಕಾರಿ ಕ್ಯಾಂಪ್ಬೆಲ್ ವಿಲ್ಸನ್ ಅವರು ಆತಂರಿಕ ಸಂವಹನದಲ್ಲಿ ಎಲ್ಲಾ ಸಿಬ್ಬಂದಿಗಳು ಗಮನಾರ್ಹವಾದ ಪ್ರತಿ ಘಟನೆಯನ್ನು ವರದಿ ಮಾಡುವಂತೆ ತಾಕೀತು ಮಾಡಿದ್ದಾರೆ. ನವೆಂಬರ್ 26ರಂದು ನ್ಯೂಯಾಕ್-ದೆಹಲಿ ನಡುವಿನ ಏರ್‍ಇಂಡಿಯಾ ವಿಮಾನದಲ್ಲಿ ಪಾನಮತ್ತ ಪುರುಷ ಪ್ರಯಾಣಿಕರೊಬ್ಬರು ಮಹಿಳಾ ಪ್ರಯಾಣಿಕರೊಬ್ಬರ ಬ್ಲಾಂಕೆಟ್ ಮೇಲೆ ಮೂತ್ರ […]

ಪರೀಕ್ಷೆ ವೇಳೆ ವಿದ್ಯಾರ್ಥಿನಿಯರ ಒಳಉಡುಪು ತೆಗೆಸಿದ ಘಟನೆ : ಸತ್ಯ ಶೋಧನ ಸಮಿತಿ ರಚನೆ

ನವದೆಹಲಿ,ಜು.20- ಕೇರಳದ ಕೊಲ್ಲಂ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ನೀಟ್-ಯುಜಿ 2022ರ ಪರೀಕ್ಷೆ ವೇಳೆ ನಡೆದಿದೆ ಎನ್ನಲಾದ ಅಹಿತಕರ ಘಟನೆಯ ಸತ್ಯಾನ್ವೇಷಣೆಗೆ ಮೂರು ಜನರ ಸಮೀತಿಯೊಂದನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರಚಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಹಿರಿಯ ನಿರ್ದೇಶಕ ಡಾ.ಸಾಧನ ಪರಾಶರ್, ತಿರುವನಂತಪುರಂನ ಸರಸ್ವತಿ ವಿದ್ಯಾಲಯ ಹರಪೂರ ವಟಿಯೋರ್ಕಾವ್ ಕಾಲೇಜಿನ ಪ್ರಾಂಶುಪಾಲರಾದ ಶೈಲಜಾ, ಯರ್ನಾಕುಲಂನ ಪ್ರಗತಿ ಅಕಾಡೆಮಿಯ ಸುಚಿತ್ರಾ ಸಜಿಂತಾ ಅವರುಗಳು ಸಮಿತಿಯ ಸದಸ್ಯರಾಗಿದ್ದಾರೆ. ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚನೆ ನಡೆಸಬೇಕು. ಇದಕ್ಕೆ ಸಂಬಂಧಪಟ್ಟ […]