ಪ.ಜಾ, ಪ.ಪಂ ಮೀಸಲಾತಿ ಹೆಚ್ಚಳ ಒಂದು ಐತಿಹಾಸಿಕ ನಿರ್ಧಾರ : ಸಿಎಂ

ಬೆಂಗಳೂರು,ಫೆ.24- ಅನೇಕ ಸವಾಲುಗಳ ನಡುವೆಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದು ಒಂದು ಐತಿಹಾಸಿಕ ನಿರ್ಧಾರ. ಬರುವ ದಿನಗಳಲ್ಲಿ ಇದರ ಲಾಭ ಆ ಸಮುದಾಯಕ್ಕೆ ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 15ನೇ ವಿಧಾನಸಭೆಯ ಕೊನೆಯ ದಿನವಾದ ಹಿನ್ನಲೆಯಲ್ಲಿ ಮಾತನಾಡಿದ ಬೊಮ್ಮಾಯಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದು ಐತಿಹಾಸಿಕ ನಿರ್ಣಯ. ಇದಕ್ಕಾಗಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಮುಂದೊಂದು ದಿನ ಬೇರೆ ರಾಜ್ಯಗಳು ಇದನ್ನು […]

ಮೃತಪಟ್ಟ ಜಾನುವಾರುಗಳ ಪರಿಹಾರ ಮೊತ್ತ ಹೆಚ್ಚಳಕ್ಕೆ ಚರ್ಚೆ

ಬೆಂಗಳೂರು,ಫೆ.13-ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳ ಪರಿಹಾರ ಮೊತ್ತ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪಶು ಸಂಗೋಪನ ಸಚಿವ ಪ್ರಭು ಚವ್ಹಾಣ್ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶಂಪುರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚರ್ಮಗಂಟು ರೋಗದಿಂದ ಮೃತಪಟ್ಟ ಹಸುಗೆ 20 ಸಾವಿರ, ಕರುಗೆ 5 ಸಾವಿರದಂತೆ 37 ಕೋಟಿ ಪರಿಹಾರ ನೀಡಲಾಗಿದೆ. ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಪರಿಹಾರ ನೀಡಲಾಗುತ್ತಿಲ್ಲ. ನಮ್ಮ ರಾಜ್ಯದಲ್ಲಿ ನೀಡಲಾಗುತ್ತಿದೆ ಎಂದರು. ಆಗ ಬಂಡೆಪ್ಪ […]

ಆಸ್ತಿ ನೋಂದಣಿ ಏರಿಕೆ : ಪುಟಿದೆದ್ದ ರಿಯಲ್ ಎಸ್ಟೇಟ್

ಬೆಂಗಳೂರು,ಡಿ.6- ಕೋವಿಡ್ ಲಾಕ್‍ಡೌನ್‍ದಿಂದ ಮಂಕಾಗಿದ್ದ ಆಸ್ತಿ ನೋಂದಣಿ ಇದೀಗ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಹಣ ದುಬ್ಬರ, ದುಬಾರಿ ಬಡ್ಡಿದರ, ಅನಿಶ್ಚಿತತೆಯ ಹೊರತಾಗಿಯೂ ಪ್ರಸಕ್ತ 2022-23 ಸಾಲಿನಲ್ಲಿ ರಾಜ್ಯಾದ್ಯಂತ ಆಸ್ತಿ ಪತ್ರಗಳ ನೋಂದಣಿ ಪ್ರಮಾಣ ಗಣನೀಯ ಏರುಗತಿಯಲ್ಲಿದೆ. ಕೋವಿಡ್ ಎಫೆಕ್ಟ್: ಕೋವಿಡ್ ದಿಂದಾಗಿ ಎರಡು ವರ್ಷ ಭೂ ವಹಿವಾಟು ಪಾತಾಳಕ್ಕೆ ಇಳಿದಿತ್ತು. ಭೂಮಿ ಖರೀದಿ-ಮಾರಾಟ ವಹಿವಾಟು ಸಂಪೂರ್ಣ ನೆಲಕಚ್ಚಿತ್ತು. ಇದರಿಂದ ರಾಜ್ಯಾದ್ಯಂತ ಆಸ್ತಿ ಪತ್ರಗಳ ನೋಂದಣಿ ಪ್ರಕ್ರಿಯೆಯಲ್ಲಿ ಬಹುತೇಕ ಕುಸಿತ ಕಂಡಿತ್ತು. ಉಪ ನೋಂದಣಿ ಕಚೇರಿ: 2020-21ರಲ್ಲಿ […]

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷೆಗೂ ಮೀರಿ ಹರಿದುಬಂತು ಆದಾಯ

ಬೆಂಗಳೂರು,ಡಿ.5- ಆದಾಯ ಸಂಗ್ರಹದಲ್ಲಿ ರಾಜ್ಯ ಉತ್ತಮ ಸಾಧನೆ ತೋರುತ್ತಿದೆ. ಕಳೆದ ಬಾರಿಗಿಂತ ಗಣನೀಯ ಏರಿಕೆ ಕಂಡಿದ್ದು, ಇದರಿಂದ 2022-23 ಬಜೆಟ್ ಅಂದಾಜು ಮೀರಿ ಆದಾಯ ಸಂಗ್ರಹದ ನಿರೀಕ್ಷೆ ಮೂಡಿದೆ.ಕಳೆದ ಮೂರು ವರ್ಷಗಳಿಂದ ಕೋವಿಡ್ ನಿರ್ಬಂಧಗಳಿಂದ ರಾಜ್ಯದ ಆದಾಯ ಸೊರಗಿ ಹೋಗಿದ್ದವು. ತೆರಿಗೆಮೂಲಗಳಿಂದ ನಿರೀಕ್ಷಿತ ಆದಾಯ ಸಂಗ್ರಹ ಸಾಧ್ಯವಾಗಿ ರಲಿಲ್ಲ. ಇದರಿಂದ ರಾಜ್ಯದ ಬೊಕ್ಕಸ ಆದಾಯ ಕೊರತೆ ಅನುಭವಿಸಿತ್ತು. ಆದರೆ ಇದೀಗ ಕೋವಿಡ್ ಆತಂಕ ಬಹುತೇಕ ದೂರವಾಗಿದ್ದು, ರಾಜ್ಯ ಸರ್ಕಾರದ ಆದಾಯ ಸಂಗ್ರಹ ಮತ್ತೆ ಸಂಪೂರ್ಣವಾಗಿ ಚೇತರಿಕೆ ಕಂಡಿದೆ. […]

ನ.1ರಿಂದಲೇ ಪೂರ್ವಾನ್ವಯವಾಗುವಂತೆ ಮೀಸಲಾತಿ ಹೆಚ್ಚಳ ಜಾರಿ

ಬೆಂಗಳೂರು,ನ.18- ಪರಿಶಿಷ್ಟ ವರ್ಗಗಳ ಮೀಸಲಾತಿ ಹೆಚ್ಚಳದ ಸುಗ್ರೀವಾಜ್ಞೆಯು ಶಿಕ್ಷಣ ಸಂಸ್ಥೆಗಳಲ್ಲಿ ನವೆಂಬರ್ 1ರಿಂದಲೇ ಪೂರ್ವಾನ್ವಯವಾಗುವಂತೆ ಅನುಷ್ಠಾನಗೊಳಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಆದೇಶಿಸಿದೆ. ಸುಗ್ರೀವಾಜ್ಞೆ ಪ್ರಕಾರ, ಮೀಸಲಾತಿ ಪ್ರಮಾಣವನ್ನು ಪರಿಶಿಷ್ಟ ಜಾತಿಗೆ ಶೇ.15ರಿಂದ ಶೇ.17% ಕ್ಕೆ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 3ರಿಂದ ಶೇ.7ಕ್ಕೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರದಿಂದ ನಿರ್ವಹಿಸಲಾಗುತ್ತಿರುವ ಅಥವಾ ರಾಜ್ಯ ನಿಧಿಗಳಿಂದ ಅನುದಾನ ಪಡೆಯುತ್ತಿರುವ ಯಾವುದೇ ಶಾಲೆ, ಕಾಲೇಜು ಅಥವಾ ಇತರೆ ಶೈಕ್ಷಣಿಕ ಸಂಸ್ಥೆಗಳಿಗೆ ಈ ಮೀಸಲಾತಿ ಹೆಚ್ಚಳ ಅನ್ವಯ ವಾಗಲಿದೆ. ಕಾಂಗ್ರೆಸ್‍ ಆರೋಪದಲ್ಲಿ […]