ಮೋದಿ ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿ ಇಲ್ಲ : ಭಾಗವತ್

ಭೋಪಾಲ್,ನ.20- ಪ್ರಧಾನಿ ನರೇಂದ್ರ ಮೋದಿ ಅವರು ಸಂಘ ಸ್ವಯಂ ಸೇವಕ ಮತ್ತು ಪ್ರಚಾರಕ ಆದರೆ, ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆಜಬಲ್‍ಪುರದಲ್ಲಿನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಹೇಳಿದರು. ಆರ್‍ಎಸ್‍ಎಸ್ ನೇರವಾಗಿ ಅಥವಾ ರಿಮೋಟ್‍ನಿಂದ ನಿಯಂತ್ರಿಸುವುದಿಲ್ಲ ಎಂದ ತಿಳಿಸಿದ್ದಾರೆ. ಸಂಘದ ಹೆಸರು ಬಂದಾಗಲ್ಲೆ ನೀವು ಮೋದಿಜಿಯವರ ಹೆಸರನ್ನು ತೆಗೆದುಕೊಳ್ಳುವಿರಿ. ಹೌದು, ಮೋದಿಜಿ ಸಂಘ ಸ್ವಯಂಸೇವಕ ಮತ್ತು ಪ್ರಚಾರಕ. ವಿಎಚ್‍ಪಿ ಕೂಡ ನಮ್ಮ ಸ್ವಯಂಸೇವಕರಿಂದ ನಡೆಸಲ್ಪಡುತ್ತದೆ. ಆದರೆ, ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ. […]