ಶೀಘ್ರದಲ್ಲೇ ನೇಪಾಳದ ಪ್ರಧಾನಿ ಭಾರತ ಭೇಟಿ

ಕಠ್ಮಂಡು, ಜ.11- ನಾಟಕೀಯ ಬೆಳವಣಿಗೆಯಲ್ಲಿ ನೇಪಾಳದ ಪ್ರಧಾನಿಯಾಗಿರುವ ಪುಷ್ಪ ಕಮಲ್ ದಹಾಲ್ ಪ್ರಚಂಡ ಶೀಘ್ರವೇ ಭಾರತಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.ಭಾರತ ಭೇಟಿಗೆ ಸಂಬಂಸಿದಂತೆ ರಾಯಭಾರ ಕಚೇರಿ ಅಗತ್ಯ ತಯಾರಿಗಳನ್ನು ನಡೆಸುತ್ತಿದೆ ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ. ಆದರೆ ಭಾರತದ ಕಡೆಯಿಂದ ಇನ್ನೂ ಪ್ರವಾಸದ ಕಾರ್ಯಕ್ರಮ ಕುರಿತು ಅಕೃತ ಮಾಹಿತಿ ಹೊರ ಬಿದ್ದಿಲ್ಲ. ನೇಪಾಳಿ ಕಾಂಗ್ರೆಸ್ ನೊಂದಿಗೆ ಪ್ರಚಂಡ ನೇತೃತ್ವದ ಸಿಪಿಎನ್-ಮಾವೋವಾದಿ ಕೇಂದ್ರ ಚುನಾವಣಾ ಮೈತ್ರಿ ಹೊಂದಿತ್ತು. ಆದರೆ ಕಳೆದ ವರ್ಷ ನಡೆದ ನಾಟಕೀಯ ರಾಜಕೀಯ ಬೆಳವಣಿಗೆಯಲ್ಲಿ ಪ್ರಚಂಡ ಮೈತ್ರಿಯಿಂದ […]

ಭಾರತದೊಂದಿಗಿನ ನಮ್ಮ ಬಾಂಧವ್ಯ ಸ್ಥಿರವಾದದ್ದು ; ಅಮೆರಿಕ

ನವದೆಹಲಿ,ಜ.14- ಭಾರತ ಮತ್ತು ಅಮೆರಿಕ ವಿಶ್ವದ ಎರಡು ದೊಡ್ಡ ವ್ಯಾಪಾರ ಪಾಲುದಾರ ದೇಶಗಳಾಗಲಿವೆ ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಅಮೆರಿಕ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲೂ ಭವಿಷ್ಯ ನುಡಿದಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಸದಾಕಾಲ ಮುಂದುವರೆಯಲಿದೆ ಇದರ ಜೊತೆಗೆ ಭಾರತದೊಂದಿಗಿನ ಚೀನಾ ಆಕ್ರಮಣದ ಬಗ್ಗೆಯೂ ನಮ್ಮ ದೇಶ ಗಮನ ಹರಿಸಲಿದೆ ಎಂದು ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಜಾನ್ ಬ್ಲಿಂಕೆನ್ ಅವರು ಮಾರ್ಚ್‍ನಲ್ಲಿ ಭಾರತದಲ್ಲಿ […]

ನಮ್ಮ ಹತ್ರ ಅಣುಬಾಂಬ್ ಇದೆ : ಭಾರತಕ್ಕೆ ಬೆದರಿಕೆ ಹಾಕಿದ ಪಾಕ್ ಸಚಿವೆ

ಇಸ್ಲಾಮಾಬಾದ್,ಡಿ.18- ಪ್ರಧಾನಿ ಮೋದಿ ಕುರಿತು ಪಾಕ್ ಸಚಿವ ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಲ್ಲೆ ಮತ್ತೊಬ್ಬ ಪಾಕ್ ಸಚಿವೆ ಶಾಜಿಯಾ ಮಾರಿ ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿದಕ್ಕೆ ಭಾರತದಲ್ಲಿ ವ್ಯಪಕ ಪ್ರತಿಭಟನೆ ನಡೆದು ಒಂದು ದಿನದ ನಂತರ ಮತ್ತೆ ಮಾಧ್ಯಮ ಸಂದರ್ಶನದ ವೇಳೆ ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಎಂಬುದನ್ನು ಭಾರತ ಮರೆಯಬಾರದು. ನಮ್ಮ ಪರಮಾಣು ಮೌ ನವಾಗಿದೆ ಅಗತ್ಯ ಬಿದ್ದರೆ ನಾವು ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. […]

ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿ : ಮೊದಲ ಪಂದ್ಯ ಗೆದ್ದು 1-0 ಮುನ್ನಡೆ ಸಾಧಿಸಿದ ಭಾರತ

ಚಿತ್ತಗಾಂಗ್,ಡಿ.18- ಇಲ್ಲಿ ನಡೆದ ಅತಿಥೇಯ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ಭಾರತ ಜಯಸಾಧಿಸಿದೆ. ಗೆಲುವಿಗಾಗಿ 513 ರನ್‍ಗಲ 4ನೇ ದಿನದಾಟ ಮುಗಿದಾಗ 6 ವಿಕೆಟ್ ನಷ್ಟಕ್ಕೆ 272 ರನ್ ಮಾಡಿತ್ತು ಕೊನೆಯ ದಿನವಾದ ಇಂದು ಮೆಹಿದಿ ಹಸನ್ ಮಿರಾಜ್ ಮತ್ತು ಅರ್ಧಶತಕ ಸಿಡಿಸಿದ್ದ ಶಕೀಬ್ ಅಲ್‍ಹಸನ್ ಕಣಕಿಳಿದು ತಾಳ್ಮಯ ಆಟಕ್ಕೆ ಮುಂದಾದರು ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ಸ್ಪಿನ್ ಜೋಡಿ ಬೇಗನೇ ಔಟ್ ಮಾಡಿ ಪೆವೀಲಿನ್‍ಗೆ ಅಟ್ಟಿದರು. ಮೊದಲು ವೇಗಿ ಸಿರಾಜ್ […]

ಮತ್ತೆ ಕೊರೊನಾ ಅಬ್ಬರ: 21 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ

ನವದೆಹಲಿ, ಜು.22- ನಾಲ್ಕೈದು ದಿನಗಳಿಂದ ತಗ್ಗಿದ್ದ ಕೊರೊನಾ ಸೋಂಕು ಮತ್ತೆ ಅಬ್ಬರಿಸಿದ್ದು, 21 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಆತಂಕಕಾರಿ ಬೆಳವಣಿಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬೆಳಗ್ಗೆ ಬಿಡುಗಡೆ ಮಾಡಿದ ದೈನಂದಿನ ವರದಿಯಲ್ಲಿ 21,880 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿನ ಪ್ರಮಾಣ 4,38,47,065 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,49,482 ಕ್ಕೆ ಏರಿದೆ ಸಚಿವಾಲಯ ತಿಳಿಸಿದೆ. ಕೇರಳದಲ್ಲಿ 22, […]