ಭಾರತದಲ್ಲಿ ಕೊರೋನಾ ಮಾಹಾ ಸ್ಫೋಟ, ಒಂದೇ ದಿನ 58,097 ಕೇಸ್ ದಾಖಲು

ನವದೆಹಲಿ,ಜ.5- ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 58,097 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ. ನಿನ್ನೆ ಹೋಲಿಸಿದರೆ ಶೇ.55ರಷ್ಟು ಅಧಿಕವಾಗಿದೆ. ಸರ್ಕಾರವು ದೇಶದಾದ್ಯಂತ ಲಸಿಕೆ ಹಾಕುವ ಆಂದೋಲನವನ್ನು ತ್ವರಿತಗೊಳಿಸುತ್ತಿದೆ. 15ರಿಂದ 18ರ ವಯೋಮಾನದವರಿಗೆ ಈಗ ವ್ಯಾಪಕವಾಗಿ ಲಸಿಕೆ ಹಾಕಿಸಲಾಗುತ್ತಿದೆ. ನಿನ್ನೆ 534 ಮಂದಿ ಕೋವಿಡ್‍ಗೆ ಬಲಿಯಾಗಿದ್ದು, ಒಟ್ಟಾರೆ ಕೋವಿಡ್ ಮರಣ ಪ್ರಮಾಣ 4,82,551ಕ್ಕೆ ಏರಿದೆ ಎಂದು ಅಂಕಿಅಂಶಗಳು ತಿಳಿಸಿವೆ. ಇದುವರೆಗೆ ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್‍ನ ಒಟ್ಟು 2,135 ಪ್ರಕರಣಗಳು 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ […]