ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆ, ಮರಣ ಪ್ರಮಾಣ ಏರಿಕೆ..!

ನವದೆಹಲಿ, ಜ.30- ನಿನ್ನೆ ಒಂದೇ ದಿನದಲ್ಲಿ 2,34,281 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಭಾರತದ ಒಟ್ಟಾರೆ ಕೋವಿಡ್-19 ಪ್ರಕರಣಗಳ ಸಂಖ್ಯೆ 4.10 ಕೋಟಿಗಿಂತ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ. ಕಳೆದ 24 ಗಂಟೆಗಳ ಅವಯಲ್ಲಿ 893 ಮಂದಿ ಕೊರೊನಾಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 4,94,091ಕ್ಕೇರಿದೆ. ಸಕ್ರಿಯ ಪ್ರಕರಣಗಳು 18,84,937ಕ್ಕೆ ತಲುಪಿದ್ದು, 1,19,396ರಷ್ಟು ಕಡಿಮೆಯಾಗಿದೆ. ಇದು ಒಟ್ಟಾರೆ ಸೋಂಕಿನ ಶೇ.4.59ರಷ್ಟಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ 93.89 ಪ್ರತಿಶತದಷ್ಟಿದೆ ಎಂದು ಸಚಿವಾಲಯ ಹೇಳಿದೆ. […]