ಭಾರತದಲ್ಲಿ ಒಂದೇ ದಿನ 37,379 ಮಂದಿಗೆ ಕೊರೊನಾ ಸೋಂಕು

ನವದೆಹಲಿ, ಜ.4- ಕಳೆದ ವಾರದಿಂದಲೂ ಏರಿಕೆ ಗತಿಯಲ್ಲಿರುವ ಕೊರೊನಾ ಸೋಂಕಿನ ಇಂದು ಹೊಸದಾಗಿ 37,379 ಪ್ರಕರಣಗಳು ಪತ್ತೆಯಾಗಿದ್ದು, 124 ಮಂದಿ ಜೀವ ಹಾನಿಯಾಗಿದೆ. ಓಮಿಕ್ರಾನ್ ರೂಪಾಂತರಿ ಸೋಂಕು 1892 ಮಂದಿಯಲ್ಲಿ ಕಾಣಿಸಿಕೊಂಡಿದೆ. ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬೆಳಗ್ಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿ 1,70,830 ಸಕ್ರಿಯ ಪ್ರಕರಣಗಳಿವೆ. ಆದಾಗ್ಯೂ ಇವುಗಳ ಸಂಖ್ಯೆ ಒಟ್ಟು ಸೋಂಕಿನಲ್ಲಿ ಶೇ.1ರ ಒಳಗೆ ದಾಖಲಾಗಿದೆ, ನಿನ್ನೆಯ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.49ರಷ್ಟು ಎಂದು ತಿಳಿಸಲಾಗಿದೆ. […]